ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಅಂ.ಬಾ. ನಿಲ್ದಾಣದ ಸೌರಫಲಕಕ್ಕೆ ದುರಸ್ತಿ
ಕೇಪ್ ಕೆನಾವೆರಲ್(ಫ್ಲೋರಿಡಾ)-
ಬಾಹ್ಯಾಕಾಶ ನೌಕೆ ಡಿಸ್ಕವರಿಯ 15 ದಿನಗಳ ಯಾತ್ರೆಯು ಕಮಾಂಡರ್ ಪಮೇಲಾ ಮೆಲ್ರಾಯ್ ಅವರಿಗೆ ಒಂದು ಕನಸಿನಂತೆ ಭಾಸವಾಗುತ್ತಿದೆ. ತಾವು ಮತ್ತು ಸಿಬ್ಬಂದಿ ಭೂಮಿಗೆ ಮರಳುವ ಹಾದಿಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಫಲಕವೊಂದಕ್ಕೆ ಹಾಕಿದ ತಾತ್ಕಾಲಿಕ ತೇಪೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು.

ನೌಕೆಯು ಉಜ್ವಲ ಶರತ್ಕಾಲದ ಮಧ್ಯಾಹ್ನ ಸುರಕ್ಷಿತವಾಗಿ ಭೂಮಿಗೆ ಇಳಿಯಿತು, 7 ಜನ ಗಗನಯಾನಿಗಳು ಮತ್ತು ಮೂವರು ಅಂತಾರಾಷ್ಟ್ರೀಯ ನಿಲ್ದಾಣದ ನಿವಾಸಿಗಳು ಹಾನಿಗೊಂಡ ಸೌರಫಲಕದ ದುರಸ್ತಿ ಕಾರ್ಯಾಚರಣೆಗೆ ಜತೆ ಸೇರಿದ್ದರು. ಇದೊಂದು ಅತ್ಯಂತ ಅಪಾಯಕಾರಿ ಮತ್ತು ಕಷ್ಟದ ದುರಸ್ತಿಯಾಗಿದ್ದು, ಕಕ್ಷೆಯಲ್ಲಿ ಯಾವತ್ತೂ ಈ ಪ್ರಯತ್ನ ಮಾಡಿರಲಿಲ್ಲ.

ಆದರೆ ಬಾಹ್ಯಾಕಾಶ ನಿಲ್ದಾಣದ ಭವಿಷ್ಯ ಈ ದುರಸ್ತಿ ಮೇಲೆ ನಿಂತಿತ್ತು. ಸ್ಕಾಟ್ ಪೆರಾಜಿಂಸ್ಕಿ ಏಕೈಕ ಬಾಹ್ಯಾಕಾಶ ನಡಿಗೆ ಮೂಲಕ ಇದನ್ನು ಸಾಧಿಸಿದರು.
ಭೂಮಿಗೆ ಮರಳುವ ಹಾದಿಯಲ್ಲಿ ಡಿಸ್ಕವರಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ಮೂಲಕ ಓರೆಯಾಗಿ ಮೊಂಟಾನಾ, ವ್ಯೋಮಿಂಗ್ ಮೂಲಕ ಫ್ಲೋರಿಡಾದಲ್ಲಿ ಭೂಸ್ಪರ್ಶ ಮಾಡಿತು.
ಮತ್ತಷ್ಟು
ಸಮಾವೇಶಕ್ಕೆ ಸಜ್ಜಾದ ಬೇನಜೀರ್ ಗೃಹಬಂಧನ
ಫೆ.15ರ ವೇಳೆಗೆ ಪಾಕ್ ಚುನಾವಣೆ: ಮುಷರಫ್
ಪಾಕ್‌ನಲ್ಲಿ ಶೀಘ್ರವೇ ಚುನಾವಣೆ: ಕಸೂರಿ ಆಶಯ
ಬಂಧನ ಭೀತಿ: ತಲೆಮರೆಸಿಕೊಂಡಿರುವ ಇಮ್ರಾನ್
ಜಗತ್ತಿನ ಅತಿ ಎತ್ತರದ ಬುದ್ಧ ವಿಗ್ರಹ ದುರಸ್ತಿ
ಪಾಕ್: ಆಕ್ರಮಿತ ಪ್ರದೇಶ ಬಿಟ್ಟು ತೆರಳಿದ ಬಂಡುಕೋರರು