ಪಾಕಿಸ್ತಾನದ ಸ್ವಾಧೀನದಲ್ಲಿರುವ ಅಣ್ವಸ್ತ್ರಗಳ ಸುರಕ್ಷತೆಯನ್ನು ನಿಭಾಯಿಸುವ ಅನಿರೀಕ್ಷಿತ ಸಂದರ್ಭದ ಯೋಜನೆ ಬಗ್ಗೆ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರು ಬ್ರಿಟನ್ನಿನ ಪ್ರಧಾನಮಂತ್ರಿ ಗೋರ್ಡೋನ್ ಬ್ರೌನ್ ಅವರ ಜತೆ ಚರ್ಚಿಸಿದ್ದಾರೆ.
ಪಾಕಿಸ್ತಾನ ಅಧ್ಯಕ್ಷ ಬುಷ್ ವಿರುದ್ಧ ಗಲಭೆಗಳಿಂದ ಅಲ್ಲಿ ಅರಾಜಕತೆ ಸೃಷ್ಟಿಯಾಗಬಹುದು ಎಂಬ ಭೀತಿಯಿಂದ ಪಾಕಿಸ್ತಾನ ಪರಮಾಣು ಅಸ್ತ್ರದ ಸುರಕ್ಷತೆ ಕುರಿತು ಚರ್ಚಿಸಲಾಯಿತು ಎಂದು ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ಇದೊಂದು ರಹಸ್ಯ ಯೋಜನೆಯಾಗಿದ್ದರೂ,ಅಣ್ವಸ್ತ್ರ ಸೌಲಭ್ಯಗಳ ಮೇಲೆ ಪಾಕಿಸ್ತಾನದ ಹತೋಟಿಯು ರಾಜಿ ಮಾಡಿಕೊಳ್ಳುವಷ್ಟು ಅಪಾಯದಲ್ಲಿದೆಯೆಂದು ಯಾವುದೇ ಗುಪ್ತಚರ ವರದಿಗಳು ಬಂದಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಮಿಲಿಟರಿ ಪಡೆಗಳು ದೃಢವಾದ ನಿಯಂತ್ರಣ ಸಾಧಿಸಿದ್ದು, ಉಗ್ರಗಾಮಿಗಳ ಕೈಗೆ ಅಣ್ವಸ್ತ್ರಗಳು ಸಿಗುವ ಅಪಾಯವಿಲ್ಲ ಎಂದು ಬುಷ್ ಬ್ರೌನ್ ಅವರಿಗೆ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
|