ಬೆಳಕಿನ ಹಬ್ಬ ದೀಪಾವಳಿಯನ್ನು ಬ್ರಿಟನ್‌ನಲ್ಲಿ ಸಾವಿರಾರು ಹಿಂದುಗಳು ಮತ್ತು ಸಿಖ್ಖರು ಅತ್ಯುತ್ಸಾಹದಿಂದ ಶುಕ್ರವಾರ ರಾತ್ರಿ ಆಚರಿಸಿದ ಬಳಿಕ ಬ್ರಿಟನ್ ಪ್ರಧಾನಮಂತ್ರಿ ಗೋರ್ಡೋನ್ ಬ್ರೌನ್ ದೀಪಾವಳಿಯನ್ನು ಅದ್ಭುತ, ಸಮಗ್ರ ಉತ್ಸವವೆಂದು ಬಣ್ಣಿಸಿದ್ದಾರೆ.
ವಿವಿಧ ಚಾನೆಲ್‌ಗಳಲ್ಲಿ ಪ್ರಸಾರ ಮಾಡಿದ ಸಂದೇಶದಲ್ಲಿ "ದೀಪಾವಳಿಯ ಪವಿತ್ರ ಸಂದರ್ಭದಲ್ಲಿ ನಾನು ಪ್ರತಿ ಹಿಂದು, ಸಿಖ್ ಸಮುದಾಯಕ್ಕೆ ಶುಭಾಶಯ ಕಳಿಸಲು ಬಯಸುತ್ತೇನೆ. ದಿವಾಳಿ ಅದ್ಭುತ ಹಬ್ಬವಾಗಿದ್ದು ಜಗತ್ತಿನ ಅನೇಕ ಹಿನ್ನೆಲೆಯ ಎಲ್ಲ ಸಮುದಾಯದ ಜನರನ್ನು ಮೀರಿ ಈ ಉತ್ಸವ ತಲುಪುತ್ತದೆ.
ಜೀವನ, ಆಶಯ ಮತ್ತು ಶುಭಾರಂಭ ಪ್ರತಿನಿಧಿಸುವ ದೀಪಗಳನ್ನು ಬೆಳಗುವ ಸಾಂಕೇತಿಕ ಆಚರಣೆಯು ಏಕತೆ ಮತ್ತು ಶಾಂತಿಯ ಪ್ರಬಲ ಸಂದೇಶವನ್ನು ನೀಡುತ್ತದೆ" ಎಂದು ಅವರು ನುಡಿದರು.
|