ಶ್ರೀಲಂಕಾದ ಉತ್ತರ ಭಾಗದಲ್ಲಿ ಸೇನಾಪಡೆಗಳ ಮತ್ತು ಉಗ್ರರ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಸೈನಿಕರು ಸೇರಿದಂತೆ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.
ಸೇನಾಪಡೆಗಳು ಹಾಗು ಎಲ್‌ಟಿಟಿಇ ಉಗ್ರರ ನಡುವೆ ನಡೆದ ಘರ್ಷಣೆಯಲ್ಲಿ 16ಕ್ಕೂ ಹೆಚ್ಚಿನ ಉಗ್ರರು ಸಾವನ್ನಪ್ಪಿದ್ದು,24 ಮಂದಿ ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ವನ್ನಿ ಗಡಿರೇಖೆಯಲ್ಲಿರುವ ನವಥಾಕುಲಂ, ಕುದ್ರುನಿಟ್ಟಕುಲಂ, ನಾರಿಕುಲಂ, ವೈಲಾಠಿಕುಲಂ ಮತ್ತು ಉಮಯಾರಸಕುಲಂ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಘರ್ಷಣೆ ನಡೆದಿದೆ.
ಮನ್ನಾರ್‌ನಿಂದ ವಾಯುನಿಯಾ ಜಿಲ್ಲೆಗಳವರೆಗಿನ ವನ್ನಿ ಗಡಿ ರೇಖೆಯನ್ನು ದಾಟಲು ವಿಫಲ ಪ್ರಯತ್ನ ನಡೆಸಿದ ಉಗ್ರರ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಯಿತು ಎಂದು ಸೇನಾ ಮೂಲಗಳು ತಿಳಿಸಿವೆ
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಎಲ್‌ಟಿಟಿಇ ಉಗ್ರರು, ವಾಯುನಿಯಾ ಜಿಲ್ಲೆಯಲ್ಲಿರುವ ಕಂಬ್ಲಿವೇವಾ ಪ್ರದೇಶದಲ್ಲಿ ನಾಗರಿಕ ಸೇನಾದಳದ ಇಬ್ಬರು ಹೋಮ್‌ಗಾರ್ಡ್‌ಗಳು ರಸ್ತೆ ಬದಿಯಲ್ಲಿ ಸಾಗುತ್ತಿರುವಾಗ, ಅವರನ್ನು ಗುರಿಯಾಗಿಸಿ ಸ್ಪೋಟಕವನ್ನು ಸಿಡಿಸಿ ಹತ್ಯೆ ಮಾಡಿದ್ದಾರೆ.
ಸೇನಾಪಡೆಗಳು ಉಗ್ರರ ವಿರುದ್ಧ ಭಾರಿ ಕಾರ್ಯಾಚರಣೆಯನ್ನು ಹಮ್ಮಿಕೊಂಡಿವೆ ಎಂದು ಸೇನಾಪಡೆಯ ಮೂಲಗಳು ತಿಳಿಸಿವೆ..
|