ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಫರೋ ಸಮಾಧಿ ತೆರೆದರೆ ಮೃತ್ಯು
ಈಜಿಪ್ಟಿನ ಫರೋ ಟುಟಾನ್‌ಕಾಮುನ್ ಸಮಾಧಿಯನ್ನು ತೆರೆದಿದ್ದಕ್ಕೆ ಸಂಬಂಧಿಸಿದ ಶಾಪವನ್ನು ವೈಭವೀಕರಣ ಮಾಡುವುದರಲ್ಲಿ ಬ್ರಿಟನ್ ಸುದ್ದಿಪತ್ರಿಕೆಗಳು ಪ್ರಧಾನಪಾತ್ರವನ್ನು ವಹಿಸಿತೆಂದು ಟೈಮ್ಸ್ ಆನ್‌ಲೈನ್ ವರದಿ ಮಾಡಿದೆ. ಫ್ಲೀಟ್ ಸ್ರ್ಟೀಟ್ ಇದೊಂದು ಸೇಡಿನ ಕ್ರಮ ಎನ್ನುವಂತೆ ಬಿಂಬಿಸಿದೆ.

ಈಜಿಪ್ಟ್ ಫರೋನ ಸಮಾಧಿಯನ್ನು ತೆರೆದು ಎರಡು ತಿಂಗಳಾಗುವಷ್ಟರಲ್ಲೇ ಲಾರ್ಡ್ ಕಾರ್ನರ್‌ವಾನ್ ಸತ್ತಿದ್ದನು. ಕೆಲವು ಸುದ್ದಿಪತ್ರಿಕೆಗಳು ಲಾರ್ಡ್ ಕಾರ್ನರ್‌ವಾನ್ ಪ್ರಾಚೀನ ಶಾಪಕ್ಕೆ ಬಲಿಪಶುವಾಗಿದ್ದಾನೆಂದು ವರ್ಣಿಸಿದವು.

ವಾಸ್ತವವಾಗಿ ಅವನು ಮುಖಕ್ಷೌರ ಮಾಡುವಾಗ ಸೊಳ್ಳೆ ಕಡಿತದಿಂದ ಉಂಟಾದ ಸೋಂಕಿಗೆ ಗಾಯವಾಗಿದ್ದರಿಂದ ರಕ್ತವು ವಿಷಪೂರಿತವಾಗಿ ಸತ್ತಿದ್ದನು. ಫರೋಗಳ ಸಮಾಧಿಯನ್ನು ವಿರೂಪಗೊಳಿಸುವವರಿಗೆ ಎಲ್ಲ ರೀತಿಯ ವಿನಾಶ ಕಾದಿರುತ್ತದೆ ಎಂದು ಮಾರ್ನಿಂಗ್ ಪೋಸ್ಟ್ ಬರೆಯಿತು.

ಸಮಾಧಿಯೊಳಗೆ ಪ್ರವೇಶಿಸುವವರಿಗೆ ಸಾವಿನ ರೆಕ್ಕೆಗಳು ಆವರಿಸಿಕೊಳ್ಳುತ್ತದೆ ಎಂದು ಸಮಾಧಿಯಲ್ಲಿ ಬರೆದಿರುವ ಕೆತ್ತನೆಯಲ್ಲಿ ತಿಳಿಸಲಾಗಿದೆ ಎಂದು ಮತ್ತೊಂದು ಪತ್ರಿಕೆ ಬರೆಯಿತು.

ಯಾತ್ರೆಯ ನಾಯಕ ಆರ್ಥರ್ ಮೇಸ್ ಮತ್ತು ಬಳಿಕ ಅಮರಿಕದ ಶೋಧಕ ಆಲ್ಬರ್ಟ್ ಲಿತ್ಗೋ ಅನಿರೀಕ್ಷಿತವಾಗಿ ನಿಧನರಾದಾಗ ಪ್ರಾಚೀನ ಶಾಪದ ಕಥೆಗೆ ಮರುಜೀವ ಸಿಕ್ಕಿತು. ಸಮಾಧಿಯನ್ನು ಭಗ್ನಗೊಳಿಸುವವರಿಗೆ ದುರದೃಷ್ಟ ಆವರಿಸುತ್ತದೆ ಎಂಬ ನಿಗೂಢ ಕಥೆಗಳು ಹುಟ್ಟಿಕೊಂಡವು.

ಈ ಶಾಪ ಜನರಿಗೆ ಮಾತ್ರ ತಟ್ಟುವಂತೆ ಕಾಣಲಿಲ್ಲ. ಕಾರ್ನಾವಾನ್‌ನ ಮೂರು ಕಾಲುಗಳ ನಾಯಿ ಕೂಡ ತನ್ನ ಮಾಲೀಕ ಅಸುನೀಗಿದ ಗಳಿಗೆಯೇ ನಿಖರವಾಗಿ ಸತ್ತಿತ್ತು. ಈ ನಿಗೂಢತೆಗೆ ಇನ್ನಷ್ಟು ಕಿಡಿ ಹತ್ತಿಸಿ ಯಾವುದೋ ದುಷ್ಟಶಕ್ತಿ ಕ್ರಿಯಾಶೀಲವಾಗಿದೆ ಎಂದು ಶೆರ್ಲಾಕ್ ಹೋಮ್ಸ್ ಸೃಷ್ಟಿಕರ್ತ ಸರ್ ಆರ್ಥರ್ ಕಾನಾನ್ ಡೋಯ್ಲೆ ಹೇಳಿದ್ದನು.
ಮತ್ತಷ್ಟು
ಸೇನೆ- ಉಗ್ರರ ಘರ್ಷಣೆ:19 ಸಾವು
ತಮಿಳುನಾಡು ತೀರದಲ್ಲಿ ಉಗ್ರರ ಚಟುವಟಿಕೆ
ದೀಪಾವಳಿ ಅದ್ಭುತ ಉತ್ಸವ: ಬ್ರೌನ್
ಗೃಹ ಬಂಧನದಿಂದ ಬೆನಜೀರ್‌ಗೆ ಮುಕ್ತಿ
ಪಾಕ್‌ನಲ್ಲಿನ ಅಣ್ವಸ್ತ್ರ ಸುರಕ್ಷತೆ ಕುರಿತು ಚರ್ಚೆ
ತಾಲಿಬಾನ್ ಪರ ಉಗ್ರರಿಗೆ 200 ಪಾಕ್ ಸೈನಿಕರ ಶರಣು