ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
30 ಎಲ್‌ಟಿಟಿಇ ಉಗ್ರರ ಹತ್ಯೆ
ಶ್ರೀಲಂಕಾ ಪಡೆಗಳು ಮತ್ತು ತಮಿಳು ವ್ಯಾಘ್ರ ಬಂಡುಕೋರರ ನಡುವೆ ನಡೆದ ಭೀಕರ ಕಾಳಗದಲ್ಲಿ 30 ಎಲ್‌ಟಿಟಿಇ ಉಗ್ರರು ಸೇರಿದಂತೆ ಕನಿಷ್ಠ 34 ಜನರು ಸತ್ತಿದ್ದಾರೆ. ವಾಯುನಿಯ- ಮನ್ನಾರ್ ಮುಂಚೂಣಿ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಕಳೆದ 24 ಗಂಟೆಗಳಲ್ಲಿ 30ಕ್ಕೂ ಹೆಚ್ಚು ಎಲ್‌ಟಿಟಿಇ ಉಗ್ರರು ಸತ್ತಿದ್ದಾರೆ ಮತ್ತು ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಜತೆಗೆ, ಸೇನಾಧಿಕಾರಿಯೊಬ್ಬರು ಸತ್ತಿದ್ದಾರೆ ಮತ್ತು ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.ಈ ಬಗ್ಗೆ ಎಲ್‌ಟಿಟಿಇಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಾಯುನಿಯದ ತಂಪನಾಯಿನಲ್ಲಿ ಉಗ್ರಗಾಮಿಗಳು ಸೈನಿಕರ ಮೇಲೆ ದಾಳಿಗೆ ದಂಡೆತ್ತಿಹೋದಾಗ ಸೇನೆ ಮತ್ತು ಉಗ್ರರ ನಡುವೆ ಭೀಕರ ಸಂಘರ್ಷ ಉಂಟಾಯಿತು.

ಬೆಳಿಗ್ಗೆಯಿಂದ ಸಂಜೆವರೆಗ ನಡೆದ ಘರ್ಷಣೆಯಲ್ಲಿ ಶತ್ರುಗಳ ಮುನ್ನಡೆಗೆ ಪರಿಣಾಮಕಾರಿಯಾಗಿ ಶ್ರೀಲಂಕಾ ಪಡೆಗಳು ತಡೆದಿದ್ದು, ಎಲ್‌ಟಿಟಿಇಗೆ ಅಪಾರ ನಷ್ಟವುಂಟುಮಾಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಮತ್ತಷ್ಟು
ಸರ್ವಾಧಿಕಾರ ಉಗ್ರರಿಗೆ ವರ:ಭುಟ್ಟೋ
ದುಬೈ ಸೇತುವೆ ದುರಂತ:3ಭಾರತೀಯರ ಬಂಧನ
ಫರೋ ಸಮಾಧಿ ತೆರೆದರೆ ಮೃತ್ಯು
ಸೇನೆ- ಉಗ್ರರ ಘರ್ಷಣೆ:19 ಸಾವು
ತಮಿಳುನಾಡು ತೀರದಲ್ಲಿ ಉಗ್ರರ ಚಟುವಟಿಕೆ
ದೀಪಾವಳಿ ಅದ್ಭುತ ಉತ್ಸವ: ಬ್ರೌನ್