ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಇರಾನ್ ಜತೆ ಯುದ್ಧಕ್ಕೆ ಒಲವಿಲ್ಲ:ರೈಸ್
PTI
ಅಮೆರಿಕವು ಇರಾನ್ ಜತೆ ಯುದ್ಧಕ್ಕೆ ಒಲವು ಹೊಂದಿದೆ ಎಂಬ ವಾದವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಂಡೋಲೀಜಾ ರೈಸ್ ಅಲ್ಲಗಳೆದಿದ್ದಾರೆ. ಇಸ್ಲಾಮಿಕ್ ಗಣರಾಜ್ಯವು ಪರಮಾಣು ಕಾರ್ಯಾಚರಣೆಯನ್ನು ತ್ಯಜಿಸಿದರೆ ಅದರ ಜತೆ ಸಂಧಾನ ಮಾತುಕತೆಯ ಪ್ರಸ್ತಾಪವನ್ನು ನವೀಕರಿಸುವುದಾಗಿ ಹೇಳಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ಅನುಮೋದಿಸಿದ ಸೆನೆಟ್ ನಿರ್ಣಯದಲ್ಲಿ ಇರಾನ್ ಕ್ರಾಂತಿಕಾರಿ ಪಡೆಗೆ ಭಯೋತ್ಪಾದಕ ಕಾರ್ಯಾಚರಣೆ ಎಂಬ ಹಣೆಪಟ್ಟಿ ನೀಡಿದ್ದು, ಯುದ್ಧವನ್ನು ಮತ್ತಷ್ಟು ಹತ್ತಿರಕ್ಕೆ ತರುವ ಕ್ರಮ ಎಂಬ ಟೀಕಾಕಾರರು ವಾದಿಸಿದ್ದರು. ಈ ಬಗ್ಗೆ ರೈಸ್ ಅವರನ್ನು ಪ್ರಶ್ನಿಸಿದಾಗ, ಇರಾನ್ ವಿಷಯಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಮಾರ್ಗವನ್ನು ಅನುಸರಿಸುವುದಾಗಿ ಅಧ್ಯಕ್ಷ ಬುಷ್ ಹೇಳಿದ್ದಾರೆಂದು ರೈಸ್ ತಿಳಿಸಿದರು.

ಈ ನಿರ್ಣಯದಲ್ಲಿ ಇರಾನ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದೆ. ಅದನ್ನು ನಾವು ಖಂಡಿತವಾಗಿ ನೆರವೇರಿಸಿದ್ದೇವೆ ಎಂದು ಅವರು ಇರಾನ್ ಸೇರಿದಂತೆ ಕ್ರಾಂತಿಕಾರಿ ಕಾವಲು ಪಡೆಯ ವಿರುದ್ಧ ಹೊಸ ದಿಗ್ಬಂಧನವನ್ನು ಬುಷ್ ಆಡಳಿತ ಪ್ರಕಟಿಸಿದ್ದನ್ನು ಅವರು ಹೇಳಿದರು.
ಮತ್ತಷ್ಟು
30 ಎಲ್‌ಟಿಟಿಇ ಉಗ್ರರ ಹತ್ಯೆ
ಸರ್ವಾಧಿಕಾರ ಉಗ್ರರಿಗೆ ವರ:ಭುಟ್ಟೋ
ದುಬೈ ಸೇತುವೆ ದುರಂತ:3ಭಾರತೀಯರ ಬಂಧನ
ಫರೋ ಸಮಾಧಿ ತೆರೆದರೆ ಮೃತ್ಯು
ಸೇನೆ- ಉಗ್ರರ ಘರ್ಷಣೆ:19 ಸಾವು
ತಮಿಳುನಾಡು ತೀರದಲ್ಲಿ ಉಗ್ರರ ಚಟುವಟಿಕೆ