ಪಾಕಿಸ್ತಾನದ ಸುಪ್ರೀಂಕೋರ್ಟ್‌ನ ಕೆಲವು ನ್ಯಾಯಮೂರ್ತಿಗಳು ಹಾಗೂ ಅವರ ಮಕ್ಕಳು ಅನ್ಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಕುರಿತು ಗುಪ್ತ ಚಿತ್ರಗಳನ್ನು ಪಾಕಿಸ್ತಾನದ ಸೇನಾಗುಪ್ತಚರವೊಂದು ಸೆರೆ ಹಿಡಿದಿದ್ದು, ಈಗ ಆ ನ್ಯಾಯಾಮೂರ್ತಿಗಳು ಲೈಂಗಿಕ ಬ್ಲಾಕ್‌ಮೇಲ್ ಎದುರಿಸುವಂತಾಗಿದೆ ಎಂದು ಲಂಡನ್‌ನ ಮುಂಚೂಣಿ ದಿನಪತ್ರಿಕೆಯೊಂದು ವರದಿ ಮಾಡಿದೆ.
ಗುಪ್ತ ಲೈಂಗಿಕ ಸಂಬಂಧಗಳ ವಿಡಿಯೋಗಳನ್ನು 11 ಮಂದಿ ನ್ಯಾಯಮೂರ್ತಿಗಳ ಪೈಕಿ ಮೂವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿಯೇ ರವಾನಿಸಲಾಗಿದ್ದು, ಜನರಲ್ ಪರ್ವೇಜ್ ಮುಷರ್ರಫ್ ಅವರು ಸೇನಾಸಮವಸ್ತ್ರದಲ್ಲಿಯೇ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಂದುವರೆಯಲು ಈಗಲೂ ಅರ್ಹರಾಗಿದ್ದಾರೆ ಎಂದು ಹೇಳಬೇಕೆಂದು ನ್ಯಾಯಮೂರ್ತಿಗಳಿಗೆ ತಿಳಿಸಲಾಗಿದೆ ಎಂದು ಸಂಡೇ ಟೈಮ್ಸ್ ವರದಿ ಮಾಡಿದೆ.
ಈ ಗುಪ್ತ ವಿಡಿಯೋದಲ್ಲಿ ಒರ್ವ ನ್ಯಾಯಮೂರ್ತಿಯು ತಮ್ಮ ಯುವ ಹೆಂಡತಿಯೊಂದಿಗೆ ಇರುವ ಚಿತ್ರವನ್ನು ಹಾಗೂ ಇನ್ನೊಂದರಲ್ಲಿ ನ್ಯಾಯಮೂರ್ತಿಯ ಮಗಳೊಬ್ಬಳು ಬೇರೆ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಚಿತ್ರಗಳನ್ನು ಸೆರೆ ಹಿಡಿದಿರುವುದಾಗಿ ತಿಳಿದು ಬಂದಿದೆ.
ಈ ಸಂದೇಶವು ಸ್ಪಷ್ಟವಾಗಿದೆ ಎಂದು ಬ್ರಿಟಿಷ್ ವಕೀಲರು ಒಪ್ಪಿಕೊಂಡಿದ್ದು, ಈ ಟೇಪ್‌ಗಳ ಕುರಿತಾಗಿ ಪಾಕಿಸ್ತಾನದ ವಕೀಲರು ತಮಗೆ ಹೇಳಿದ್ದಾರೆ ಎಂದು ಹೇಳಿದ್ದಾರೆ. ನೀವು ತಪ್ಪು ನಿರ್ಣಯ ನೀಡಿದರೆ, ಈ ವಿಡಿಯೋಗಳನ್ನು ಬಹಿರಂಗಪಡಿಸಿ, ನಿಮ್ಮ ಕುಟುಂಬಗಳನ್ನು ಸರ್ವನಾಶ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತುರ್ತು ಪರಿಸ್ಥಿತಿಯನ್ನು ನಿರ್ಣಯಿಸುವ ಕೆಲವು ವಾರಗಳ ಮೊದಲೇ, ನ್ಯಾಯಮೂರ್ತಿಗಳ ವಿರುದ್ಧ ಕೆಲವು ಪ್ರಮುಖ ಸಾಕ್ಷಿಗಳನ್ನು ಉಪಯೋಗಿಸಿಕೊಳ್ಳುವ ಸಂಬಂಧ ಈ ಗುಪ್ತ ಕ್ಯಾಮೆರಾಗಳನ್ನು ಬಳಸಿಕೊಂಡಿರುವುದಾಗಿ ವರದಿಯು ತಿಳಿಸಿದೆ.
ಪಾಕಿಸ್ತಾನದ ಐಎಸ್ಐ ಈ ನ್ಯಾಯಮೂರ್ತಿಗಳನ್ನು ಸಂತಸಪಡಿಸುವಂತೆ ಹುಡುಗಿಯರನ್ನು ಕಳುಹಿಸಿಕೊಟ್ಟಿತ್ತು. ಆದರೆ, ಈ ಗುಪ್ತವಾದ ಕ್ಯಾಮೆರಾ ಬಗ್ಗೆ ತಿಳಿಯಪಡಿಸದಂತೆ ಆ ಮಹಿಳೆಯರಿಗೆ ಅವರು ಮಾಹಿತಿ ನೀಡಿದ್ದರು ಎಂಬುದಾಗಿ ಪತ್ರಿಕೆಯ ವರದಿ ತಿಳಿಸಿದೆ.
|