ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮುಷರ್ರಫ್‌ಗೆ ಸುಪ್ರೀಂಕೋರ್ಟ್ ನೋಟೀಸ್
ಪಾಕಿಸ್ತಾನ ಸುಪ್ರೀಂಕೋರ್ಟ್ ಸೋಮವಾರ ಅಧ್ಯಕ್ಷ ಮುಷರ್ರಫ್ ಅವರಿಗೆ ನೋಟೀಸ್ ನೀಡಿ ರಾಷ್ಟ್ರದ ಮೇಲೆ ತುರ್ತುಪರಿಸ್ಥಿತಿ ಹೇರಿಕೆ ಪ್ರಶ್ನಿಸಿದ ಅರ್ಜಿಗೆ ಉತ್ತರಿಸುವಂತೆ ತಿಳಿಸಿದೆ.

ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕ ಟಿಕ್ಕಾ ಇಕ್ಬಾಲ್ ಮೊಹಮದ್ ಖಾನ್ ಸಲ್ಲಿಸಿದ ಅರ್ಜಿಗೆ ಸಂಬಂಧಪಟ್ಟಂತೆ ಮುಖ್ಯನ್ಯಾಯಮೂರ್ತಿ ಅಬ್ದುಲ್ ಹಮೀದ್ ದೋಗಾರ್ ನೇತೃತ್ವದ ಪೂರ್ಣಪೀಠವು ಪ್ರಧಾನಿ ಶೌಕತ್ ಅಜೀಜ್ ಅವರಿಗೆ ಕೂಡ ನೋಟೀಸ್ ನೀಡಿದೆ.

ಅಧ್ಯಕ್ಷರಾಗಿ ಮತ್ತು ಸೇನೆಯ ಮುಖ್ಯಸ್ಥರ ಸಾಮರ್ಥ್ಯದ ಆಧಾರದ ಮೇಲೆ ಅರ್ಜಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಅವರಿಗೆ ಆದೇಶಿಸಿದೆ. ಮೂಲಭೂತ ಹಕ್ಕುಗಳನ್ನು ಅಮಾನುತುಗೊಳಿಸಿ ನ್ಯಾಯಾಧೀಶರನ್ನು ವಜಾ ಮಾಡಲು ಮುಷರ್ರಫ್ ಹೇರಿದ ತುರ್ತುಪರಿಸ್ಥಿತಿ ಮತ್ತು ಹಂಗಾಮಿ ಸಂವಿಧಾನಿಕ ಆದೇಶವನ್ನು ಅಸಂವಿಧಾನಿಕ ಎಂದು ತೀರ್ಪು ನೀಡುವಂತೆ ಅರ್ಜಿದಾರರು ಮನವಿ ಸಲ್ಲಿಸಿದ್ದರು.

ಆದರೆ ಪಿಪಿಪಿ ಅರ್ಜಿಯಿಂದ ದೂರವಿದ್ದು, ಖಾನ್ ವೈಯಕ್ತಿಕ ಸಾಮರ್ಥ್ಯದ ಮೇಲೆ ಅರ್ಜಿ ಸಲ್ಲಿಸಿದ್ದು, ಪಕ್ಷದ ಬೆಂಬಲವಿಲ್ಲ ಎಂದು ನುಡಿದಿದೆ. ತುರ್ತುಪರಿಸ್ಥಿತಿಗೆ ಕಾನೂನುಬದ್ಧತೆ ನೀಡಲು ಈ ಅರ್ಜಿಯ ಸಲ್ಲಿಕೆಯು ಪ್ರೇರೇಪಿತಗೊಂಡಿದೆ ಎಂದು ಅವರು ನುಡಿದರು.
ಮತ್ತಷ್ಟು
ರಷ್ಯಾ ಜತೆ ಫಲಿಸದ ಪರಮಾಣು ಒಪ್ಪಂದ
ನ್ಯಾಯಮೂರ್ತಿಗಳಿಗೆ ಮುಷರ್ರಫ್ ಲೈಂಗಿಕ ಬ್ಲ್ಯಾಕ್‌‌ಮೇಲ್
ಇರಾನ್ ಜತೆ ಯುದ್ಧಕ್ಕೆ ಒಲವಿಲ್ಲ:ರೈಸ್
30 ಎಲ್‌ಟಿಟಿಇ ಉಗ್ರರ ಹತ್ಯೆ
ಸರ್ವಾಧಿಕಾರ ಉಗ್ರರಿಗೆ ವರ:ಭುಟ್ಟೋ
ದುಬೈ ಸೇತುವೆ ದುರಂತ:3ಭಾರತೀಯರ ಬಂಧನ