ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪ್ರದಾನಿ ಹುದ್ದೆ ತಮಗೆ ಬೇಡ:ಬೇನಜೀರ್
PTI
ಪರ್ವೇಜ್ ಮುಷರ್ರಫ್ ಆಳ್ವಿಕೆಯಡಿಯಲ್ಲಿ ತಾವು ಪ್ರಧಾನ ಮಂತ್ರಿ ಹುದ್ದೆಯನ್ನು ನಿರ್ವಹಿಸುವುದಿಲ್ಲ ಎಂದು ಬೇನಜೀರ್ ಭುಟ್ಟೊ ಮಂಗಳವಾರ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಹಿಂದಿರುಗಿದ ಬಳಿಕ ಇಂತಹ ಕಠಿಣ ನಿಲುವನ್ನು ಮೊದಲ ಬಾರಿಗೆ ತಾಳಿರುವ ಅವರು ಮುಷರ್ರಫ್ ಅಧ್ಯಕ್ಷಗಿರಿಯನ್ನು ತ್ಯಜಿಸಬೇಕೆಂದು ಆಗ್ರಹಿಸಿದ್ದಾರೆ.

ಭುಟ್ಟೊ ಅವರನ್ನು ಗೃಹಬಂಧನದಲ್ಲಿ ಇರಿಸಿದ ಬಳಿಕ ಅವರು ಲಾಹೋರ್‌ನಿಂದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿ ಮುಷರ್ರಫ್ ಅಧ್ಯಕ್ಷ ಹುದ್ದೆ ತ್ಯಜಿಸಲು ಈಗ ಸಕಾಲ ಎಂದು ನುಡಿದರು. ಮುಷರ್ರಫ್ ಅಧ್ಯಕ್ಷರಾಗಿ ಇರುವತನಕ ತಾವು ಪ್ರಧಾನಮಂತ್ರಿ ಆಗುವುದಿಲ್ಲ ಎಂದೂ ಅವರು ಪುನರುಚ್ಚರಿಸಿದರು.

ಏತನ್ಮಧ್ಯೆ, ಮುಷರ್ರಫ್ ಜತೆ ಅಧಿಕಾರ ಹಂಚಿಕೆ ಸೇರಿದಂತೆ ಎಲ್ಲ ಮಾತುಕತೆಯನ್ನು ಬೇನಜೀರ್ ಮುಗಿಸಿದ್ದಾರೆಂದು ಅವರ ಪತಿ ಅಸೀಫ್ ಅಲಿ ಜರ್ದಾರಿ ತಿಳಿಸಿದರು. ಜನಪ್ರಿಯ ಬೆಂಬಲಕ್ಕೆ ಜನರಲ್ ಹೆದರುತ್ತಿದ್ದಾರೆಂದು ಜರ್ದಾರಿ ಆರೋಪಿಸಿದ್ದು, ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳ ಜತೆ ಮಾತುಕತೆ ನಡೆಸಲು ಪಿಪಿಪಿ ಮುಕ್ತವಾಗಿದೆ ಎಂದು ಹೇಳಿದರು.

ಮುಷರ್ರಫ್ ಅವರು ಸೇನೆ ಮುಖ್ಯಸ್ಥ ಹುದ್ದೆ ತ್ಯಜಿಸಿ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಭುಟ್ಟೊ ಈ ಮುಂಚೆ ಹೇಳಿದ್ದರು. ಆದರೆ ಮುಷರ್ರಫ್ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಬೇಕೆಂದು ಭುಟ್ಟೊ ಇದೇ ಮೊದಲ ಬಾರಿಗೆ ನುಡಿದಿದ್ದಾರೆ.
ಮತ್ತಷ್ಟು
ಬೀಜಿಂಗ್: ಭಾರತ ಚೀನಾ ಮಾತುಕತೆ
ಭುಟ್ಟೊಗೆ ಏಳು ದಿನ ಗೃಹಬಂಧನ
ಮುಷರ್ರಫ್‌ಗೆ ಸುಪ್ರೀಂಕೋರ್ಟ್ ನೋಟೀಸ್
ರಷ್ಯಾ ಜತೆ ಫಲಿಸದ ಪರಮಾಣು ಒಪ್ಪಂದ
ನ್ಯಾಯಮೂರ್ತಿಗಳಿಗೆ ಮುಷರ್ರಫ್ ಲೈಂಗಿಕ ಬ್ಲ್ಯಾಕ್‌‌ಮೇಲ್
ಇರಾನ್ ಜತೆ ಯುದ್ಧಕ್ಕೆ ಒಲವಿಲ್ಲ:ರೈಸ್