ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಸರ್ಕಾರ ಮಂಗಳವಾರ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಜತೆ ಇನ್ನೊಂದು ಸಂಪರ್ಕದ ದ್ವಾರವನ್ನು ತೆರೆದಿದೆ. ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರು ತಮ್ಮ ಪಕ್ಷವು ಮುಷರ್ರಫ್ ಜತೆ ಮಾತುಕತೆಯನ್ನು ಅಂತ್ಯಗೊಳಿಸಿದೆ ಎಂದು ಹೇಳಿದ ಬಳಿಕ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಈ ಸಂಪರ್ಕವು ರಾಜಕೀಯ ಸಂಧಾನಕ್ಕಾಗಿ ಎಂದು ಹೇಳಲಾಗಿದ್ದು, ಷರೀಫ್ ಸಂಗಡಿಗರು ಮತ್ತು ಮುಷರ್ರಫ್ ತಂಡದ ನಡುವೆ ಸಂಪರ್ಕ ಕಲ್ಪಿಸಲಾಗುವುದು.ಮುಷರ್ರಫ್ ಸಮೀಪವರ್ತಿ ಎಂದು ನಂಬಲಾದ ಕೈಗಾರಿಕೋದ್ಯಮಿ ಇಕ್ಬಾಲ್ ಅಹ್ಮದ್ ಮಂಗಳವಾರ ಜೆಡ್ಡಾಗೆ ಧಾವಿಸಿದ್ದಾರೆ ಎಂದು ಡಾನ್ ಸುದ್ದಿ ಚಾನೆಲ್ ವರದಿ ಮಾಡಿದೆ.
ಅಹ್ಮದ್ ಅವರು ಜೆಡ್ಡಾದಲ್ಲಿ ಷರೀಫ್ ಅವರನ್ನು ಸಂಧಿಸಲಿದ್ದು, ಹೆಚ್ಚಿನ ರಾಜಕೀಯ ತಿಳಿವಳಿಕೆ ಮತ್ತು ಸಂಧಾನಕ್ಕಾಗಿ ಮಾತುಕತೆ ನಡೆಯಲಿದೆ ಎಂದು ಚಾನೆಲ್ ವರದಿ ಮಾಡಿದೆ.
|