ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ವೇಳಾಪಟ್ಟಿ ನಿಗದಿಗೆ ಚುನಾವಣಾ ಆಯೋಗ ಸಭೆ
ಪಾಕಿಸ್ತಾನ ಚುನಾವಣಾ ಆಯೋಗ ಇಂದು ಸಭೆ ಸೇರಿ ಮುಂಬರುವ ಚುನಾವಣೆಗಳ ವೇಳಾ ಪಟ್ಟಿ ಮತ್ತು ರಾಜಕೀಯ ಪಕ್ಷಗಳು ಅನುಸರಿಸಬೇಕಾದ ನೀತಿ ಸಂಹಿತೆಗಳನ್ನು ರೂಪಿಸಲು ನಿರ್ಧರಿಸಲಾಗಿದೆ,

ಮುಖ್ಯ ಚುನಾವಣಾ ಆಯುಕ್ತರಾದ ಖಾಜಿ ಮೊಹಮ್ಮದ್ ಫಾರೂಕ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು, ಪಕ್ಷಗಳ ನೀತಿಸಂಹಿತೆಗಳ ಪರಿಶೀಲನೆ ಹಾಗೂ ದೇಶದ ಪ್ರಮುಖ ಪಕ್ಷಗಳೊಂದಿಗೆ ಚರ್ಚೆ ನಡೆಸಲು ದಿನಾಂಕ ನಿಗದಿಪಡಿಸಲಿದ್ದಾರೆ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಕುಂವರ್ ದಿಲ್‌ಶಾದ್ ತಿಳಿಸಿದ್ದಾರೆ.

ಮುಂಬರುವ ನವೆಂಬರ್ 20ರೊಳಗೆ ದೇಶದ ಸಂಸತ್ತನ್ನು ವಿಸರ್ಜಿಸಿ ಚುನಾವಣೆ ದಿನಾಂಕಗಳನ್ನು ನಿಗದುಪಡಿಸಿ ಶ್ರೀಘ್ರದಲ್ಲಿ ಆದೇಶ ಹೊರಡಿಸಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ದಿಲ್‌ಶಾದ್ ತಿಳಿಸಿದ್ದಾರೆ.

ಸಭೆಯಲ್ಲಿ ಚುನಾವಣಾ ಅಧಿಕಾರಿಗಳನ್ನು ನಿಯುಕ್ತಿಗೊಳಿಸುವ ಕುರಿತು ಚರ್ಚಿಸಲಾಯಿತು ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಕುಂವರ್ ದಿಲ್‌ಶಾದ್ ತಿಳಿಸಿದ್ದಾರೆ.
ಮತ್ತಷ್ಟು
ರಾಜೀನಾಮೆಗೆ ಆಗ್ರಹಿಸುವ ಹಕ್ಕಿಲ್ಲ: ಮುಷರ್ರಫ್
ನವಾಜ್‌ಷರೀಫ್ ಜತೆ ಪಾಕ್ ಮಾತುಕತೆ
ಪ್ರದಾನಿ ಹುದ್ದೆ ತಮಗೆ ಬೇಡ:ಬೇನಜೀರ್
ಬೀಜಿಂಗ್: ಭಾರತ ಚೀನಾ ಮಾತುಕತೆ
ಭುಟ್ಟೊಗೆ ಏಳು ದಿನ ಗೃಹಬಂಧನ
ಮುಷರ್ರಫ್‌ಗೆ ಸುಪ್ರೀಂಕೋರ್ಟ್ ನೋಟೀಸ್