ಪಾಕಿಸ್ತಾನದ ಸಂಸತ್ತನ್ನು ನಾಳೆ ಮಧ್ಯರಾತ್ರಿಗೆ ವಿಸರ್ಜಿಸಿ ಉಸ್ತುವಾರಿ ಸರಕಾರವನ್ನು ನಿಯುಕ್ತಿಗೊಳಿಸಲಾಗುವುದು ಎಂದು ವಾರ್ತಾ ಸಚಿವ ತಾರೀಖ ಅಜೀಮ್ ತಿಳಿಸಿದ್ದಾರೆ.
ಪಾಕ್ ಸಂಸತ್ತು ನಾಳೆಗೆ ಐದು ವರ್ಷಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಸರ್ಜನೆಗೊಳ್ಳುವುದು. ಪಂಜಾಬ್, ಸಿಂಧ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳ ವಿಧಾನಸಭೆಗಳನ್ನು ನವೆಂಬರ್ 20ರಂದು ವಿಸರ್ಜಿಸಿ ಮುಂಬರುವ ವರ್ಷದಲ್ಲಿ ಚುನಾವಣೆಗಳನ್ನು ನಡೆಸಲಾಗುವುದು ಎಂದು ಅಜೀಮ್ ತಿಳಿಸಿದ್ದಾರೆ.
ಆಗ್ನೆಯ ಭಾಗದಲ್ಲಿರುವ ಪ್ರಾಂತ್ಯದಲ್ಲಿ ಕಳೆದ ತಿಂಗಳು ವಿಧಾನಸಭೆಯನ್ನು ವಿಸರ್ಜಿಸಿರುವುದರಿಂದ ಉಸ್ತುವಾರಿ ಸರಕಾರವನ್ನು ನೇಮಿಸಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸಂಸತ್ತು ಕಳೆದ 20 ವರ್ಷಗಳಲ್ಲಿ ಪ್ರಥಮ ಬಾರಿಗೆ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿದ್ದಾರೆ. ಪಾಕ್ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಚುನಾವಣೆಗಳನ್ನು ಜನೆವರಿ 9 ರಂದು ನಡೆಸುವುದಾಗಿ ರವಿವಾರದಂದು ಘೋಷಿಸಿದ್ದಾರೆ.
ಸುಮ್ರೋ ಬುಡಕಟ್ಟಿನ ಮೊಹಮ್ಮದ್‌ಮಿಯಾ ಸೂಮ್ರೊ ಅವರು ಉಸ್ತುವಾರಿ ಸರಕಾರದ ಪ್ರಧಾನ ಮಂತ್ರಿಗಳಾಗಿ ನಿಯುಕ್ತಿಗೊಳಿಸುವ ಸಾಧ್ಯತೆಗಳಿದ್ದು ಕೆಲ ರಾಯಭಾರಿಗಳ ಹಾಗೂ ನಿವೃತ್ತ ಮೇಜರ್‌ಗಳ ಹೆಸರುಗಳು ಸರದಿಯಲ್ಲಿವೆ ಎಂದು ತಿಳಿಸಿದ್ದಾರೆ.
|