ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸ್ವಾಟ್‌ನಲ್ಲಿ 16 ಉಗ್ರಗಾಮಿಗಳ ಹತ್ಯೆ
ಹೆಲಿಕಾಪ್ಟರ್ ಗನ್‌ಶಿಪ್‌ಗಳ ನೆರವಿನಿಂದ ಪಾಕಿಸ್ತಾನ ಭದ್ರತಾ ಪಡೆಗಳು ಪ್ರಕ್ಷುಬ್ಧಪೀಡಿತ ಸ್ವಾಟ್ ಕಣಿವೆಯಲ್ಲಿ ಬುಧವಾರ 16 ಉಗ್ರಗಾಮಿಗಳನ್ನು ಹತ್ಯೆಮಾಡಿದೆ. ತಾಲಿಬಾನ್ ಪರ ಧರ್ಮಗುರುವಿನ ಅನುಯಾಯಿಗಳ ವಿರುದ್ಧ ಸೇನೆಯು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಭಾರೀ ಸೇನಾಪಡೆಯು ಮಾಲಕಂಡ್‌ನಿಂದ ಸ್ವಾಟ್ ಪ್ರದೇಶಕ್ಕೆ ನಸುಕಿನ ಜಾವವೇ ಆಗಮಿಸಿದೆ.

ಮೂಲಭೂತವಾದಿ ಧರ್ಮಗುರು ಮೌಲಾನಾ ಫಜಲುಲ್ಲಾ ವಿರುದ್ಧ ಪ್ರಮುಖ ದಾಳಿಯನ್ನು ನಡೆಸಲು ಸೇನೆ ಸಿದ್ಧತೆ ನಡೆಸಿದ್ದು, ಫಜಲುಲ್ಲಾ ಸಂಗಡಿಗರು ಕಣಿವೆಯ ಅನೇಕ ನಗರಗಳು ಮತ್ತು ಗ್ರಾಮಗಳನ್ನು ಆಕ್ರಮಿಸಿ ಶಾಂಗ್ಲಾ ಜಿಲ್ಲೆಯತ್ತ ಧಾವಿಸಿದ್ದಾರೆ.

ಭದ್ರತಾ ಪಡೆಗಳು ಕಾಬಾಲ್‌ನ ಸಾಯ್ದು ಶರೀಫ್ ವಿಮಾನನಿಲ್ದಾಣದಲ್ಲಿ ನಾಲ್ವರು ಉಗ್ರಗಾಮಿಗಳನ್ನು ಬಂಧಿಸಿದೆ. ಬಳಿಕ ತಮ್ಮ ನಾಯಕರನ್ನು ಬಿಡಿಸಿಕೊಳ್ಳಲು ಉಗ್ರರು ದಾಳಿ ಮಾಡಿದರಾದರೂ ಕಾಲಾಳು ಪಡೆಗಳು ಮತ್ತು ಹೆಲಿಕಾಪ್ಟರ್ ಗುಂಡಿನ ದಾಳಿಗಳ ಮೂಲಕ ತೀವ್ರ ಪ್ರತಿರೋಧ ಒಡ್ಡಿದ ಸೇನೆಯು 6 ಮಂದಿ ಉಗ್ರರನ್ನು ಹತ್ಯೆ ಮಾಡಿದೆ.

ಮಟ್ಟಾದಲ್ಲಿ ಬಂಡುಕೋರರ ನೆಲೆ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಫಜಲುಲ್ಲಾ ಸಂಗಡಿಗರು ಆಕ್ರಮಿಸಿಕೊಂಡ ಶಾಂಗ್ಲಾ ಜಿಲ್ಲೆಯ ಮಹತ್ವದ ಸ್ಥಳವಾದ ಶಾಂಗ್ಲಾ ಹಿಲ್‌ಟಾಪ್‌ಗೆ ಗುರಿಯಿರಿಸಿದ ಹೆಲಿಕಾಪ್ಟರ್ ಗನ್‌ಶಿಪ್‌ಗಳು 6 ಉಗ್ರಗಾಮಿಗಳನ್ನು ಕೊಂದು ಹಾಕಿದೆ.
ಮತ್ತಷ್ಟು
ಪಾಕ್ ಸಂಸತ್ತು ನಾಳೆ ವಿಸರ್ಜನೆ -ಅಜೀಮ್
ಇಮ್ರಾನ್ ಖಾನ್ ಪೊಲೀಸ್ ವಶಕ್ಕೆ
ವೇಳಾಪಟ್ಟಿ ನಿಗದಿಗೆ ಚುನಾವಣಾ ಆಯೋಗ ಸಭೆ
ರಾಜೀನಾಮೆಗೆ ಆಗ್ರಹಿಸುವ ಹಕ್ಕಿಲ್ಲ: ಮುಷರ್ರಫ್
ನವಾಜ್‌ಷರೀಫ್ ಜತೆ ಪಾಕ್ ಮಾತುಕತೆ
ಪ್ರದಾನಿ ಹುದ್ದೆ ತಮಗೆ ಬೇಡ:ಬೇನಜೀರ್