ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪಾಕ್‌ನಲ್ಲಿ ಉಸ್ತುವಾರಿ ಪ್ರಧಾನಿ ನೇಮಕ
ಸೆನೆಟ್(ಮೇಲ್ಮನೆ) ಅಧ್ಯಕ್ಷ ಮಹಮ್ಮದ್ ಮಯಾನ್ ಸುಮ್ರೋ ಅವರನ್ನು ಪಾಕಿಸ್ತಾನದ ಉಸ್ತುವಾರಿ ಪ್ರಧಾನಮಂತ್ರಿಯಾಗಿ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ನೇಮಕ ಮಾಡಿದ್ದು, ಮಹಮ್ಮದ್ ಮಯಾನ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮಹಮ್ಮದ್ ಮಯಾನ್ ಉಸ್ತುವಾರಿ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಜನರಲ್ ಮುಷರಫ್ ಅವರು ಉಲ್ಲೇಖಿಸಿದ್ದನ್ನು ಪಾಕಿಸ್ತಾನ ದೂರದರ್ಶನವು ವರದಿ ಮಾಡಿದೆ.

ತಾಂತ್ರಿಕ ಆಡಳಿತಗಾರರನ್ನು ಒಳಗೊಂಡ ಸಣ್ಣ ಫೆಡರಲ್ ಮಂತ್ರಿಮಂಡಲವು ನಾಳೆ ಪ್ರಮಾಣವಚನ ಸ್ವೀಕರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಮಂತ್ರಿಮಂಡಲವು 12ಕ್ಕಿಂತ ಹೆಚ್ಚು ಮಂದಿಯನ್ನು ಹೊಂದಿಲ್ಲ.

ಸಂಸದೀಯ ಚುನಾವಣೆಯು 2008ರ ಜನವರಿ 9ರೊಳಗೆ ನಡೆಸಲಾಗುವುದೆಂದು ಜನರಲ್ ಮುಷರಫ್ ಈಗಾಗಲೇ ಹೇಳಿದ್ದರು.ತುರ್ತುಪರಿಸ್ಥಿತಿಯಡಿಯಲ್ಲಿ ನವೆಂಬರ್ 3ರಂದು ನಡೆಸಲಾಗುವುದೆಂದು ಅವರು ಘೋಷಿಸಿದ್ದರು.

ದೇಶದಲ್ಲಿ ತುರ್ತುಪರಿಸ್ಥಿತಿಯು ಸಂಸದೀಯ ಚುನಾವಣೆಗಾಗಿ ವಾತಾವರಣವನ್ನು ಅನುಕೂಲಕರವನ್ನಾಗಿ ಮಾಡಲಿದೆ ಎಂದು ಮುಷರಫ್ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ಪ್ರಸಕ್ತ ಲಾಹೋರ್‌ನಲ್ಲಿ ಗೃಹಬಂಧನದಲ್ಲಿರುವ ಬೆನಜೀರ್ ಭುಟ್ಟೋ ಅವರು, ತುರ್ತುಪರಿಸ್ಥಿತಿಯಡಿಯಲ್ಲಿ ಚುನಾವಣೆಯನ್ನು ನಡೆಸಲು ಈಗಾಗಲೇ ನಿರಾಕರಿಸಿದ್ದು, ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸಲು ರಾಷ್ಟ್ರೀಯ ಹೊಂದಾಣಿಕೆಗಾಗಿ ನಿಷ್ಪಕ್ಷಪಾತ ಉಸ್ತುವಾರಿ ಸರಕಾರವನ್ನು ಆಹ್ವಾನಿಸಿದ್ದಾರೆ.
ಮತ್ತಷ್ಟು
ಸರಬರಾಜಿಗೆ ಅಡ್ಡಿಯಾದರೆ ತುರ್ತು ಯೋಜನೆ
ಪಾಕಿಸ್ತಾನ: ಚೌಧರಿಗೆ "ಅಪಹರಣ"ದ ಶಂಕೆ
ಚಿಲಿಯಲ್ಲಿ ಭೂಕಂಪ: ಇಬ್ಬರ ಸಾವು
ಪ.ಬಂಗಾಳಕ್ಕೆ ಸಿಡರ್ ಚಂಡಮಾರುತ ಭೀತಿ
ಇಂದು ಪಾಕ್ ರಾ.ಅಸೆಂಬ್ಲಿ ವಿಸರ್ಜನೆ
ಇಮ್ರಾನ್ ವಿರುದ್ಧ ಗಂಭೀರ ಭಯೋತ್ಪಾದನೆ ಆರೋಪ