ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಭುಟ್ಟೊ ಗೃಹಬಂಧನ ತೆರವು
PTI
ಪ್ರತಿಪಕ್ಷದ ನಾಯಕಿ ಬೇನಜೀರ್ ಭುಟ್ಟೊ ಅವರ ಗೃಹಬಂಧನವನ್ನು ಪಾಕಿಸ್ತಾನದ ಪೊಲೀಸರು ತೆರವು ಮಾಡಿದ್ದಾರೆ. ಅಮೆರಿಕದ ವಿದೇಶಾಂಗ ಉಪಕಾರ್ಯದರ್ಶಿ ಜಾನ್ ನೆಗ್ರೊಪೋಂಟೆ ಪಾಕಿಸ್ತಾನಕ್ಕೆ ಆಗಮಿಸುವ ಕೆಲವೇ ಗಂಟೆಗಳ ಮುಂಚೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಅಂತ್ಯಗೊಳಿಸಲು ನೆಗ್ರೊಪೊಂಟೆ ಅವರನ್ನು ವಿಶೇಷ ಪ್ರತಿನಿಧಿಯಾಗಿ ಅಮೆರಿಕದ ಅಧ್ಯಕ್ಷ ಬುಷ್ ಕಳಿಸಿದ್ದು, ನೆಗ್ರೊಪಾಂಟೆ ಮುಷರ್ರಫ್ ಮತ್ತು ಭುಟ್ಟೊ ನಡುವೆ ಶಾಂತಿ ಒಪ್ಪಂದ ಕುದುರಿಸುವ ಸಾದ್ಯತೆಯಿದೆ.

ಭುಟ್ಟೊ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಿದ್ದರೂ ಬೇನಜೀರ್ ಪ್ರಸಕ್ತ ತಂಗಿರುವ ಲಾಹೋರ್ ನಿವಾಸದಲ್ಲಿ ಪೊಲೀಸರ ಉಪಸ್ಥಿತಿ ಅಪಾರ ಸಂಖ್ಯೆಯಲ್ಲಿದೆ. ಪಿಪಿಪಿ ಕಾರ್ಯಕರ್ತರು ಮತ್ತು ಮಾಧ್ಯಮದ ಮಂದಿ ನಿವಾಸದತ್ತ ಸುಳಿಯದಂತೆ ತಡೆಯಲು ಹಾಕಿದ ತಡೆಗೋಡೆಗಳನ್ನು ಇನ್ನೂ ತೆಗೆದಿಲ್ಲ.

ಭುಟ್ಟೊ ಅವರು ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಪ್ರತಿಭಟನಾ ರಾಲಿ ನಡೆಸುವುದನ್ನು ತಡೆಯಲು ಎರಡನೇ ಬಾರಿಗೆ ಅವರನ್ನು ಬಂಧಿಸಲಾಗಿತ್ತು.
ಮತ್ತಷ್ಟು
ಸಿಡರ್ ಚಂಡಮಾರುತಕ್ಕೆ 62 ಜನರ ಬಲಿ
ಪಾಕ್‌ನಲ್ಲಿ ಉಸ್ತುವಾರಿ ಪ್ರಧಾನಿ ನೇಮಕ
ಸರಬರಾಜಿಗೆ ಅಡ್ಡಿಯಾದರೆ ತುರ್ತು ಯೋಜನೆ
ಪಾಕಿಸ್ತಾನ: ಚೌಧರಿಗೆ "ಅಪಹರಣ"ದ ಶಂಕೆ
ಚಿಲಿಯಲ್ಲಿ ಭೂಕಂಪ: ಇಬ್ಬರ ಸಾವು
ಪ.ಬಂಗಾಳಕ್ಕೆ ಸಿಡರ್ ಚಂಡಮಾರುತ ಭೀತಿ