ತಮ್ಮ ರಾಜೀನಾಮೆಗೆ ಆಗ್ರಹಿಸಿರುವ ಬೇನಜೀರ್ ಭುಟ್ಟೊ ವಿರುದ್ಧ ವಾಗ್ದಾಳಿ ಮಾಡಿರುವ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್, ಪಾಶ್ಚಿಮಾತ್ಯ ರಾಷ್ಟ್ರಗಳ ಕಣ್ಮಣಿಯಾದ ಭುಟ್ಟೊ ಗೆಲ್ಲುವ ಸಂಭವವಿಲ್ಲದಿರುವುದರಿಂದ ಜನವರಿಯಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯನ್ನು ತಪ್ಪಿಸಿಕೊಳ್ಳಲು ಬಯಸಿದ್ದಾರೆಂದು ಹೇಳಿದರು.
ತುರ್ತುಪರಿಸ್ಥಿತಿ ವಿರೋಧಿ ಪ್ರತಿಭಟನೆಗಳನ್ನು ನಡೆಸದಂತೆ ಲಾಹೋರ್‌ನಲ್ಲಿ ಮಂಗಳವಾರ ಗೃಹಬಂಧನದಲ್ಲಿ ಇರಿಸಿದ್ದ ಭುಟ್ಟೊ ಅವರನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥರ ಹುದ್ದೆಗಳನ್ನು ತ್ಯಜಿಸುವಂತೆ ಅವರು ಮುಷರ್ರಫ್‌ಗೆ ಪದೇ ಪದೇ ಒತ್ತಾಯಿಸಿದ್ದರು.
ಪಾಶ್ಚಿಮಾತ್ಯ ರಾಷ್ಟ್ರಗಳ ಅಚ್ಚುಮೆಚ್ಚು ಎಂದು ಭುಟ್ಟೊ ಅವರನ್ನು ವರ್ಣಿಸಿದ ಮುಷರ್ರಫ್ , ಅವರು ಯಾವುದೇ ಪ್ರತಿಭಟನೆ ಹಮ್ಮಿಕೊಳ್ಳಲೂ ನಾವು ಅವಕಾಶ ನೀಡುವುದಿಲ್ಲ ಮತ್ತು ಚುನಾವಣೆಗೆ ಖಂಡಿತವಾಗಿ ಹೋಗುತ್ತೇವೆ ಎಂದು ಅವರು ನುಡಿದರು.
|