ಪಾಕಿಸ್ತಾನದ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ನವೆಂಬರ್ 21 ಪ್ರಕಟಿಸಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ
ಪಾಕ್ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಜನೆವರಿ 9 ರೊಳಗಾಗಿ ಚುನಾವಣೆ ನಡೆಸುವುದಾಗಿ ಪ್ರಮಾಣಿಕರಿಸಿ ಹೇಳಿದ್ದರು. ಆದರೆ ತುರ್ತಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಸರಿಯಲ್ಲ ಎನ್ನುವ ವಿರೋಧ ಪಕ್ಷಗಳು ಒತ್ತಡ ಹೇರಿದ್ದವು.
ದೇಶದ ಕೆಲ ಪ್ರಾಂತಗಳ ನಿಗದಿತ ಅವಧಿ ನವೆಂಬರ್ 20ರಂದು ಮುಕ್ತಾಯಗೊಳ್ಳುವುದರಿಂದ 21 ರಂದು ದೇಶದ ಚುನಾವಣಾ ದಿನಾಂಕವನ್ನು ಪ್ರಕಟಿಸಬಹುದೆಂದು ಸರಕಾರದ ವಕ್ತಾರರು ತಿಳಿಸಿದ್ದಾರೆ.
ನವೆಂಬರ್ 19 ರಂದು ಚುನಾವಣಾ ಆಯೋಗ ಸಭೆ ಸೇರಲಿದ್ದು, ಪಕ್ಷಗಳ ನೀತಿ ಸಂಹಿತೆ ಹಾಗೂ ಚುನಾವಣಾ ದಿನಾಂಕ ಪ್ರಕಟಿಸುವ ಬಗ್ಗೆ ಚರ್ಚಿಲಾಗುವುದು ಎಂದು ಚುನಾವಣಾ ಆಯೋಗದ ವಕ್ತಾರರು ತಿಳಿಸಿದ್ದಾರೆ.
|