ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಬಾಂಗ್ಲಾ ಚಂಡಮಾರುತ: 2000 ಜನರ ಬಲಿ
ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಸಿಡರ್ ಚಂಡಮಾರುತ ವ್ಯಾಪಕ ಹಾನಿ ಉಂಟುಮಾಡಿದ್ದು, ಸತ್ತವರ ಸಂಖ್ಯೆ 2000ಕ್ಕೆ ಮುಟ್ಟಿದೆ. ಲಕ್ಷಾಂತರ ಜನರು ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಚಂಡಮಾರುತದ ಪ್ರಕೋಪಕ್ಕೆ ಇಡೀ ಗ್ರಾಮಗಳೇ ನುಚ್ಚುನೂರಾಗಿದ್ದು, ರಕ್ಷಣಾ ಪಡೆ ಹೊರಪ್ರದೇಶಗಳಿಗೆ ತೆರಳಲು ಹರಸಾಹಸ ಮಾಡುತ್ತಿದೆ.

ಸರ್ಕಾರಿ ಅಧಿಕಾರಿಯಾಗಿ ಇಂತಹ ವಿನಾಶಕಾರಿ ಚಂಡಮಾರುತವನ್ನು ನಾನು ಕಳೆದ 20 ವರ್ಷಗಳಿಂದ ಕಂಡಿಲ್ಲ ಎಂದು ಜಲೋಕಾಟಿಯಲ್ಲಿ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಕ್ಷಾಂತರ ಜನರು ಬೀದಿಗೆ ಬಿದ್ದಿದ್ದಾರೆ ಮತ್ತು ಶೇ.1 ರಷ್ಟು ಜನರಿಗೂ ಪರಿಹಾರ ಸಾಮಗ್ರಿಗಳು ತಲುಪುತ್ತಿಲ್ಲ ಎಂದು ಅವರು ನುಡಿದಿದ್ದಾರೆ.

ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸೇನೆ ಮತ್ತು ನೆರವು ಕಾರ್ಯಕರ್ತರು ಅವಿರತ ಶ್ರಮಿಸುತ್ತಿದ್ದಾರೆ. ಅನೇಕ ಸ್ಥಳಗಳಲ್ಲಿ ಸತ್ತವರನ್ನು ಸಾಮೂಹಿಕವಾಗಿ ಹೂಳಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸುಮಾರು 2000 ಜನರು ಸತ್ತಿರುವುದು ದೃಡಪಟ್ಟಿದ್ದು, ಸತ್ತವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಸರ್ಕಾರದ ಹಾನಿ ನಿರ್ವಹಣೆ ದಳದ ಪ್ರಧಾನ ನಿರ್ದೇಶಕ ಮಸೂದ್ ಸಿದ್ಧಿಕಿ ತಿಳಿಸಿದ್ದಾರೆ.

ರಸ್ತೆಗಳಲ್ಲಿ ಬಿದ್ದಿರುವ ಮರಗಳನ್ನು ಎಳೆಯಲು ಪರಿಹಾರ ಕಾರ್ಯಕರ್ತರು ಆನೆಗಳನ್ನು ಬಳಸುತ್ತಿದ್ದಾರೆ. ಬದುಕುಳಿದವರು ಆಶ್ರಯ ತಾಣದಿಂದ ಮನೆಗೆ ಹಿಂತಿರುಗಿದಾಗ ಸಂಪೂರ್ಣ ವಿನಾಶದ ದೃಶ್ಯ ಕಂಡುಬಂತು. ತಗಡಿನಿಂದ ಕಟ್ಟಿಸಿದ ಮನೆಗಳೆಲ್ಲ ಹಾರಿಹೋಗಿವೆ. ಬಿದಿರು ಮತ್ತು ತಗಡಿನ ಮನೆಗಳ ಮೇಲೆ ಮರಗಳು ಮತ್ತು ಅವಶೇಷಗಳು ಬಿದ್ದು ಅನೇಕ ಸಾವುಗಳು ಸಂಭವಿಸಿವೆ.
ಮತ್ತಷ್ಟು
ಅಣುಶಕ್ತಿ ಅಭಿವೃದ್ಧಿ: ಈಗ ವೆನೆಜುಯೆಲಾ ಸರದಿ
ಹನೀಫ್ ಪ್ರಕರಣ:ಆಸ್ಟ್ರೇಲಿಯಾದಲ್ಲಿ ಇಂದು ಪ್ರತಿಭಟನೆ
ಪಾಕ್ : ನ.21ಕ್ಕೆ ಚುನಾವಣೆ ದಿನಾಂಕ ಪ್ರಕಟ
ಭುಟ್ಟೊ ಗೆಲ್ಲುವ ಸಂಭವವಿಲ್ಲ: ಮುಷರ್ರಫ್
ಬಾಂಗ್ಲಾ: ಚಂಡಮಾರುತಕ್ಕೆ 900 ಬಲಿ
ಉಸ್ತುವಾರಿ ಸರ್ಕಾರಕ್ಕೆ ಭುಟ್ಟೊ ತಿರಸ್ಕಾರ