ಅಕ್ಷರಶಃ ಯುದ್ಧಭೂಮಿಯಾಗಿರುವ ದಕ್ಷಿಣ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತು ಅಮೆರಿಕಾ-ನ್ಯಾಟೊ ಪಡೆಯ ಮಧ್ಯೆ ಭೀಕರ ಕಾಳಗಗಳು ನಡೆಯುತ್ತಲಿದ್ದು, ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ 33 ತಾಲಿಬಾನಿಗಳು ಬಲಿಯಾಗಿದ್ದಾರೆ.
ಏತನ್ಮಧ್ಯೆ, ಇನ್ನೊಂದೆಡೆ ತಾಲಿಬಾನಿಗಳು ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಗೆ ಕನಿಷ್ಠ ಪಕ್ಷ ನಾಲ್ಕು ಪೊಲೀಸರು ಸಾವಿಗೀಡಾದ ಪ್ರತ್ಯೇಕ ಘಟನೆ ಪೂರ್ವ ಅಫ್ಘನ್‌ನಲ್ಲಿ ಜರುಗಿದೆ ಎಂದುವರು ಹೇಳಿದ್ದಾರೆ. ತಾಲಿಬಾನಿಗಳು ಬಿಗಿಹತೋಟಿ ಹೊಂದಿರುವ ಹೇಲ್ಮಾಂಡ್ ಪ್ರಾಂತ್ಯದಲ್ಲಿ ಟ್ರಕ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಹೇರಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನಮ್ಮ ಸೇನಾ ಪಡೆಯ ಯೋಧರು ಹಠಾತ್ ದಾಳಿ ನಡೆಸಿದ್ದರಿಂದ, 33 ತಾಲಿಬಾನಿಗಳು ಹತ್ಯೆಯಾದರು ಎಂದವರು ಹೇಳಿದ್ದಾರೆ.
ಅಪ್ಘಾನಿಸ್ತಾನದಲ್ಲಿ ಕಳೆದೆರಡು ತಿಂಗಳುಗಳಿಂದ ತಾಲಿಬಾನ್ ಮತ್ತು ನ್ಯಾಟೊ-ಅಮೆರಿಕನ್ ಪಡೆ ಮಧ್ಯೆ ಭೀಕರ ಕಾಳಗಗಳು ಏರ್ಪಡುತ್ತಿದ್ದು, ಈ ಪ್ರದೇಶದ ನಾಗರಿಕರನ್ನು ತಲ್ಲಣಗೊಳಿಸಿದೆ.
|