ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮುಷರ್ರಫ್ ಮರುಆಯ್ಕೆ ಅರ್ಜಿ ವಜಾ
WD
ಪರ್ವೆಜ್ ಮುಷರ್ರಫ್ ಅಧ್ಯಕ್ಷರಾಗಿ ಮರುಆಯ್ಕೆಯಾದ ಕಾನೂನುಬದ್ಧತೆ ಪ್ರಶ್ನಿಸಿದ ಮುಖ್ಯ ಅರ್ಜಿಯನ್ನು ಪಾಕಿಸ್ತಾನ ಸುಪ್ರೀಂಕೋರ್ಟ್ ಮುಂಚೆಯೇ ನಿರೀಕ್ಷಿಸಿದಂತೆ ತಳ್ಳಿಹಾಕಿದೆ. ಈ ತೀರ್ಪು ಮುಷರ್ರಫ್ ಮತ್ತು ಅವರ ಮಿತ್ರರಾಷ್ಟ್ರವಾದ ಅಮೆರಿಕಕ್ಕೆ ತಾತ್ಕಾಲಿಕ ವಿಮೋಚನೆಯಾಗಿದೆ.

ಏಕೆಂದರೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸುವ ಮುನ್ನ ಸೇನಾ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಮುಷರ್ರಫ್ ಭರವಸೆ ನೀಡಿದ್ದರು.ಮುಖ್ಯನ್ಯಾಯಮೂರ್ತಿ ಅಬ್ದುಲ್ ಹಮೀದ್ ದೋಗಾರ್ ನೇಮಕ ಮಾಡಿದ 10 ನ್ಯಾಯಾಧೀಶರ ಸಮಿತಿಯು ಈ ತೀರ್ಪು ನೀಡಿದೆ. ಪಾಕಿಸ್ತಾನ ಸುಪ್ರೀಂಕೋರ್ಟ್ ಮುಷರ್ರಫ್ ಸಮವಸ್ತ್ರದಲ್ಲೇ ಅಧ್ಯಕ್ಷರಾಗಿ ಮರುಆಯ್ಕೆಯಾಗಿದ್ದನ್ನು ಪ್ರಶ್ನಿಸಿದ ಅರ್ಜಿಯನ್ನು ಹೊರತುಪಡಿಸಿ ಎಲ್ಲ ಆರು ಅರ್ಜಿಗಳನ್ನು ವಜಾ ಮಾಡಿತು.

ಮುಷರ್ರಫ್ ಎರಡನೆ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ಇದಕ್ಕೆ ಮುಂಚೆ ಸುಪ್ರೀಂಕೋರ್ಟ್‌ನ 11 ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಬೇಕಿತ್ತು. ಆದರೆ ಮುಷರ್ರಫ್ ತುರ್ತುಪರಿಸ್ಥಿತಿ ಹೇರಿ ಬಹುತೇಕ ಮಂದಿ ನ್ಯಾಯಾಧೀಶರನ್ನು ವಜಾ ಮಾಡಿದ ಬಳಿಕ ದೋಗಾರ್ ನೇತೃತ್ವದ 10 ನ್ಯಾಯಾಧೀಶರ ಪೀಠ ಪ್ರಕರಣದ ವಿಚಾರಣೆ ಎತ್ತಿಕೊಂಡಿದೆ.

ಇಫ್ತಿಕರ್ ಚೌಧರಿ ನೇತೃತ್ವದ ನ್ಯಾಯಾಧೀಶರ ಪೀಠವು ಅಧ್ಯಕ್ಷರಾಗಿ ತಮ್ಮ ಆಯ್ಕೆಯನ್ನು ನಿರಾಕರಿಸಲು ಯೋಜಿಸಿರುವ ಬಗ್ಗೆ ಮುಷರ್ರಫ್‌ಗೆ ಸುಳಿವು ಸಿಕ್ಕಿದ ಕೂಡಲೇ ಅವರು ರಾಷ್ಟ್ರದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು ಎಂದು ಹೇಳಲಾಗುತ್ತಿದೆ.
ಮತ್ತಷ್ಟು
ಕಲ್ಲಿದ್ದಲು ಗಣಿ ಸ್ಫೋಟ: 63 ಜನರ ಸಾವು
ಜನವರಿ 8ರಂದು ಸಾರ್ವತ್ರಿಕ ಚುನಾವಣೆ
ಅನಿಲ ಕೊಳವೆಗೆ ಬೆಂಕಿ: 28 ಜನರ ಸಾವು
ಅಮೆರಿಕದ ಒತ್ತಡಕ್ಕೆ ಮಣಿಯದ ಮುಷರಫ್
ಆಫ್ಘನ್‌ನ್ಲಲಿ ನಿಲ್ಲದ ಹಿಂಸೆ: 33 ತಾಲಿಬಾನ್‌ಗಳ ಹತ್ಯೆ
ಬಾಂಗ್ಲಾ ಚಂಡಮಾರುತ: 2000 ಜನರ ಬಲಿ