ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ರಾಲಿಯಲ್ಲಿ ಅ.18ರಂದು ನಡೆದ ಬಾಂಬ್ ದಾಳಿಯಲ್ಲಿ ಮೈಗೆ ಬಾಂಬ್‌ಗಳನ್ನು ಕಟ್ಟಿದ ಮಗುವನ್ನು ಬಳಸಿಕೊಳ್ಳಲಾಗಿದೆಯೆಂಬ ಆಘಾತಕಾರಿ ಸಂಗತಿಯನ್ನು ಮೂಲಗಳು ಬಹಿರಂಗಪಡಿಸಿದೆ. ಈ ಮಗುವನ್ನು ಹಿಡಿದಿದ್ದ ವ್ಯಕ್ತಿ ಬೇನಜೀರ್ ಅಥವಾ ಅವರ ಸಮೀಪವಿರುವ ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕನಿಗೆ ಮಗುವನ್ನು ಹಸ್ತಾಂತರಿಸಲು ಅನೇಕ ಬಾರಿ ಪ್ರಯತ್ನಿಸಿದ.
ಆದರೆ ಅವರ ಸಮೀಪ ಸುಳಿಯಲು ಆ ವ್ಯಕ್ತಿಗೆ ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ. ಬಾಂಬ್ ಸ್ಫೋಟಿಸಿದ ಶಾರಿಯ ಫೈಸಾಲ್ ಬಳಿ ಬೇನಜೀರ್ ಭುಟ್ಟೊ ಮಗುವಿನೊಂದಿಗೆ ನಿಂತಿದ್ದ ವ್ಯಕ್ತಿಯನ್ನು ನೋಡಿ ಆ ಮಗುವಿನ ಆಲಿಂಗನಕ್ಕೆ ಅಥವಾ ಮಗುವಿಗೆ ಮುತ್ತುಕೊಡುವುದಕ್ಕೆ ಸಮೀಪಕ್ಕೆ ಬರುವಂತೆ ಸೂಚಿಸಿದರು. ಆದರೆ ಅಷ್ಟರಲ್ಲಿ ಯಾರೊ ಮಧ್ಯಪ್ರವೇಶಿಸಿದರು ಮತ್ತು ಮಗುವಿನೊಂದಿಗಿರುವ ವ್ಯಕ್ತಿಯ ಅಸಹಜ ನಡವಳಿಕೆಕಾವಲುಗಾರನ ಗಮನಕ್ಕೆ ಬಂತೆಂದು ಸುದ್ದಿಪತ್ರಿಕೆ ವರದಿ ಮಾಡಿದೆ.
ತಮ್ಮ ಟ್ರಕ್ ಬಳಿಯಿರುವ ಪೊಲೀಸ್ ವ್ಯಾನ್‌ನಲ್ಲಿ ಸ್ಫೋಟವು ದೇಹಕ್ಕೆ ಬಾಂಬ್ ಕಟ್ಟಿಕೊಂಡಿರುವ ಮಗುವಿನಿಂದ ಸಂಭವಿಸಿದೆಯೆಂದು ಬೇನಜೀರ್ ಕೂಡ ಭಾವಿಸಿದ್ದಾರೆಂದು ಪಿಪಿಪಿ ನಾಯಕ ತಿಳಿಸಿದ್ದಾರೆ. ಈ ಮಗುವನ್ನು ಹಿಡಿದಿದ್ದ ವ್ಯಕ್ತಿಯನ್ನು ತಾವು ಗುರುತಿಸುವುದಾಗಿ ಬೇನಜೀರ್ ಕಾರ್ಯಕರ್ತರಿಗೆ ತಿಳಿಸಿದ್ದು ವಿಡಿಯೋ ಚಿತ್ರಗಳನ್ನು ತೋರಿಸಿದರೆ ತಾವು ಆ ವ್ಯಕ್ತಿಯನ್ನು ಗುರುತಿಸುವುದಾಗಿ ಹಲವಾರು ಟಿವಿ ಚಾನೆಲ್‌ಗಳು ಮತ್ತು ಛಾಯಾಗ್ರಾಹಕರಿಗೆ ಬೇನಜೀರ್ ತಿಳಿಸಿದ್ದರು.
ಆದ್ದರಿಂದ ತಾವು ಸಾಕ್ಷ್ಯಾಧಾರ ಒದಗಿಸುವುದಕ್ಕೆ ಸಾಧ್ಯವಾಗುವ ಎಫ್‌ಬಿಐ ಅಥವಾ ಸ್ಕಾಡ್‌ಲ್ಯಾಂಡ್ ಯಾರ್ಡ್ ಪೊಲೀಸರಿಂದ ತನಿಖೆ ಮಾಡಬೇಕೆಂದು ಬೇನಜೀರ್ ಒತ್ತಾಯಿಸುತ್ತಿದ್ದಾರೆಂದು ಪಿಪಿಪಿ ಮೂಲಗಳು ತಿಳಿಸಿವೆ.
|