ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಜೀವವುಳಿಸಿದ ಎನ್‌ಆರ್‌ಐ ಹತಾಶ ಬದುಕು
6 ವಾರಗಳ ಹಿಂದೆ ಮ್ಯಾನ್‌ಹಾಟನ್ ಅನಿವಾಸಿ ಭಾರತೀಯ ಅಡುಗೆಯವ ಅಮರ್‌ಜಿತ್ ಸಿಂಗ್ ಮನಃಶಾಸ್ತ್ರಜ್ಞೆ ಸೂಸನ್ ಬ್ಯಾರಾನ್ ಜೀವವನ್ನು ಚೂರಿ ಇರಿತದಿಂದ ಪಾರು ಮಾಡಿದ್ದರು. ಆದರೆ ಇಂದು ಅವರು ಉದ್ಯೋಗವಿಲ್ಲದೇ, ಸಹಾಯದ ಅಗತ್ಯವಿರುವ ಹತಾಶ ಸ್ಥಿತಿಗೆ ತಲುಪಿದ್ದಾರೆ. ಈ ಘಟನೆಯು ತನ್ನ ಜೀವನದ ದಿಕ್ಕನ್ನೇ ಬದಲಿಸುವುದೆಂದು ಸಿಂಗ್ ಭಾವಿಸಿರಲೇ ಇಲ್ಲ. ಉದ್ಯೋಗದಲ್ಲಿದ್ದಾಗ ಸಿಂಗ್ ಸಂತೋಷವಾಗಿದ್ದ.

ಆದರೆ ಈಗ ಸದಾ ಮನೆಯಲ್ಲಿ ಕಾಲಕಳೆಯುತ್ತಿದ್ದು, ಹಣವಿಲ್ಲದೇ ಹತಾಶನಾಗಿದ್ದಾನೆ. ಅ.6ರಂದು ನ್ಯೂಯಾರ್ಕ್ ಎರಡನೇ ಅವೆನ್ಯೂನಲ್ಲಿ ಲೀ ಕೋಲ್‌ಮನ್ ಎಂಬ ಉನ್ಮಾದಿತ ವ್ಯಕ್ತಿ ರಕ್ತದ ಓಕುಳಿಯನ್ನೇ ಹರಿಸಿದ. ಸಿಂಗ್ ಟೆಕ್ಸಾಸ್ ಸ್ಮೋಕ್ ಹೌಸ್ ರೆಸ್ಟರೆಂಟ್‌ನಲ್ಲಿ ಆಹಾರ ತಯಾರಿಸುವಾಗ ಕೋಲ್‌ಮನ್ ಪ್ರವೇಶಿಸಿ ಹಲವಾರು ಚೂರಿಗಳನ್ನು ಕದ್ದು ಸಿಂಗ್ ಮುಖಕ್ಕೆ ತಿವಿದನಲ್ಲದೇ ಬೀದಿಗೆ ಅಟ್ಟಿಸಿಕೊಂಡು ಹೋದ.

ಕೆಲವೇ ಕ್ಷಣಗಳಲ್ಲಿ ಮಾನಸಿಕ ಅಸ್ವಸ್ಥನಾದ ಕೋಲ್‌ಮ್ಯಾನ್ ಎಂಬ ಹೆಸರಿನ ಈ ವ್ಯಕ್ತಿ ಚರ್ಚ್‌ಗೆ ತನ್ನ ನಾಯಿಯೊಂದಿಗೆ ತೆರಳುತ್ತಿದ್ದ ಬ್ಯಾರಾನ್ ಕಡೆ ತನ್ನ ದೃಷ್ಟಿ ಹರಿಸಿ ಅವರ ಮೇಲೆ ದಾಳಿ ಮಾಡಿದ. ಸಿಂಗ್ ಮುಖದಲ್ಲಿ ರಕ್ತ ಸುರಿಯುತ್ತಿದ್ದರೂ ಬ್ಯಾರಾನ್ ರಕ್ಷಣೆಗೆ ಧಾವಿಸಿದ. ಬ್ಯಾರಾನ್ ತಲೆಗೆ, ಕುತ್ತಿಗೆಗೆ ಮತ್ತು ದೇಹಕ್ಕೆ ಚೂರಿಯಿಂದ ಇರಿದ ಕೋಲ್‌ಮೆನ್ ಜತೆ ಹೋರಾಟಕ್ಕಿಳಿದ. ಕರ್ತವ್ಯದಲ್ಲಿದ್ದ ಪೊಲೀಸ್ ಗ್ರೆಗರಿ ಚಿನ್ ಕೋಲ್‌ಮ್ಯಾನ್‌ಗೆ ಗುಂಡು ಹಾರಿಸಿ ಗಾಯಗೊಳಿಸಿದ.

ಈಗ ರೆಸ್ಟರೆಂಟ್ ಮುಚ್ಚಲಾಗಿದ್ದು, ಸಿಂಗ್‌ಗೆ ಯಾವುದೇ ಪರಿಹಾರ ನೀಡಿಲ್ಲ. ವ್ಯವಹಾರ ಆರಂಭವಾದರೆ ಪುನಃ ಕೆಲಸ ನೀಡುವ ಬಗ್ಗೆ ಪ್ರಸ್ತಾಪವನ್ನೂ ಮಾಲಿಕರು ಮಾಡಿಲ್ಲ. ಎಲ್ಲವನ್ನೂ ಕಳೆದುಕೊಂಡ ಸಿಂಗ್ 24 ಗಂಟೆಯೂ ಮನೆಯಲ್ಲಿ ಉಳಿದು ಜೈಲುಕೋಣೆಯಂತೆ ತಮಗೆ ಭಾಸವಾಗುತ್ತಿದೆಯೆಂದು ಹೇಳಿದ್ದಾನೆ.

ಜನರು ಸದಾ ಹೀರೋ ಎಂಬ ಪದ ಬಳಸುತ್ತಾರೆ. ಆದರೆ ಹೀರೋ ಎಂಬ ಪದ ಅರ್ಥಕಳೆದುಕೊಂಡಿದೆ ಎಂದು ನಿರಾಶೆಯ ಭಾವದಿಂದ ಅವರು ನುಡಿಯುತ್ತಾನೆ.
ಮತ್ತಷ್ಟು
ಸ್ಫೋಟಕ್ಕೆ ಬಾಂಬ್ ಕಟ್ಟಿದ ಮಗು ಬಳಕೆ
ಆನ್‌ಲೈನ್‌ ಸ್ನೇಹ ವಂಚನೆ: ಬಾಲಕಿ ಆತ್ಮಹತ್ಯೆ
ಮುಷರ್ರಫ್ ಮರುಆಯ್ಕೆ ಅರ್ಜಿ ವಜಾ
ಕಲ್ಲಿದ್ದಲು ಗಣಿ ಸ್ಫೋಟ: 63 ಜನರ ಸಾವು
ಜನವರಿ 8ರಂದು ಸಾರ್ವತ್ರಿಕ ಚುನಾವಣೆ
ಅನಿಲ ಕೊಳವೆಗೆ ಬೆಂಕಿ: 28 ಜನರ ಸಾವು