ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಇಮ್ರಾನ್ ಉಪವಾಸ ಮುಷ್ಕರ
PTI
ಜೈಲಿನಲ್ಲಿ ಬಂಧಿತರಾಗಿರುವ ಮಾಜಿ ಕ್ರಿಕೆಟ್ ಆಟಗಾರ ಮತ್ತು ಪ್ರತಿಪಕ್ಷದ ನಾಯಕ ಇಮ್ರಾನ್ ಖಾನ್ ಉಪವಾಸ ನಿರಶನವನ್ನು ಆರಂಭಿಸಿದ್ದಾರೆ. ತುರ್ತುಪರಿಸ್ಥಿತಿಯ ಮೂಲಕ ವಜಾ ಮಾಡಿದ ಸ್ವತಂತ್ರ ನ್ಯಾಯಾಧೀಶರ ಮರುನೇಮಕ ಮಾಡುವಂತೆ ಆಗ್ರಹಿಸಿದ್ದಾರೆಂದು ಅವರ ಮಾಜಿ ಪತ್ನಿ ಸೋಮವಾರ ತಿಳಿಸಿದ್ದಾರೆ. ಮುಷರ್ರಫ್ ಪರವಾಗಿ ಸುಪ್ರೀಂಕೋರ್ಟ್ ಆದೇಶ ಬಂದ ಸ್ವಲ್ಪ ಹೊತ್ತಿನಲ್ಲೇ ಇಮ್ರಾನ್ ಖಾನ್ ಉಪವಾಸ ಮುಷ್ಕರ ಆರಂಭಿಸಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಮತ್ತು ಕೆಳಕೋರ್ಟ್ ನ್ಯಾಯಾಧೀಶರನ್ನು ಮರುನೇಮಕ ಮಾಡಿಕೊಳ್ಳುವ ತನಕ ಆಹಾರ ಮತ್ತು ಪಾನೀಯ ಸೇವನೆಯನ್ನು ಇಮ್ರಾನ್ ತ್ಯಜಿಸಿದ್ದಾರೆಂದು ಅವರ ಮಾಜಿ ಪತ್ನಿ ಜೆಮಿಮಾ ಖಾನ್ ಹೇಳಿದ್ದಾರೆ.

ಖಾನ್ ಅವರನ್ನು ಲಾಹೋರ್ ಹೊರಗೆ ಬಂಧೀಖಾನೆಯಲ್ಲಿ ಇಡಲಾಗಿದೆ. ಕೊಲೆ ಮತ್ತು ಕೆಲವು ಹಿಂಸಾಚಾರದ ಅಪರಾಧಗಳಿಗಾಗಿ ಬಂಧಿತರಾದ ಸಾಮಾನ್ಯ ಕೈದಿಗಳಿರುವ ಕೋಣೆಯಲ್ಲಿ ಅವರನ್ನು ಬಂಧಿಯಾಗಿಡಲಾಗಿದೆ ಎಂದು ಅವರ ವಕ್ತಾರ ತಿಳಿಸಿದ್ದಾರೆ.
ಮತ್ತಷ್ಟು
ಪಾಕ್‌ನಲ್ಲಿ 3000 ಬಂದಿಗಳ ಬಿಡುಗಡೆ
ಕೇಮರ್ ರೋಗ್‌ನ ಜೈಲರ್ ವಿಚಾರಣೆ ಆರಂಭ
ಜೀವವುಳಿಸಿದ ಎನ್‌ಆರ್‌ಐ ಹತಾಶ ಬದುಕು
ಸ್ಫೋಟಕ್ಕೆ ಬಾಂಬ್ ಕಟ್ಟಿದ ಮಗು ಬಳಕೆ
ಆನ್‌ಲೈನ್‌ ಸ್ನೇಹ ವಂಚನೆ: ಬಾಲಕಿ ಆತ್ಮಹತ್ಯೆ
ಮುಷರ್ರಫ್ ಮರುಆಯ್ಕೆ ಅರ್ಜಿ ವಜಾ