ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಅಮೆರಿಕದ ನೆರವು ಭಾರತದ ವಿರುದ್ಧ ಬಳಕೆ
ಸೆಪ್ಟಂಬರ 11 ರ ದಾಳಿಯ ನಂತರ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವನ್ನು ಮಿತ್ರ ರಾಷ್ಟ್ರ ಎಂದು ಗುರುತಿಸಿ, ಪಾಕಿಸ್ತಾನಕ್ಕೆ ಅಮೆರಿಕ ನೀಡಿದ ಹಣಕಾಸು ನೇರವು ಭಾರತದ ವಿರುದ್ಧ ನಡೆಯುವ ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಕೆಯಾಗಿದೆ ಎಂದು ಅಮೆರಿಕದಲ್ಲಿನ ವಿಶ್ಲೇಷಕರು ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಆಫಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಹೋರಾಟಕ್ಕೆ ಪಾಕಿಸ್ತಾನ ಬೆಂಬಲವನ್ನು ತನ್ನ ವಾಯುವ್ಯ ಗಡಿಯುದ್ದಕ್ಕೂ ಪಹರೆ ಬಿಗಿ ಮಾಡುವ ಮೂಲಕ ಅಮೆರಿಕಕ್ಕೆ ನೇರವು ನೀಡಬೇಕಿತ್ತು. ಈ ಪಹರೆಗಾಗಿ ಪಾಕಿಸ್ತಾನವು ಅಮೆರಿಕದಿಂದ 10 ಬಿಲಿಯನ್ ಡಾಲರ್‌ಗಳ ನೇರವನ್ನು ಪಡೆದಿದೆ.

ಸೇಂಟರ್ ಫಾರ್ ಸ್ಟ್ರ್ಯಾಟಜಿಕ್ ಆಂಡ್ ಇಂಟರ್‌ನ್ಯಾಷನಲ್ ಸ್ಟಡಿ ಸಂಸ್ಥೆಯು ತನ್ನ ಸಂಶೋಧನಾ ವರದಿಯಲ್ಲಿ ಅಮೆರಿಕದಿಂದ ದೊರೆತ 10 ಬಿಲಿಯನ್ ಡಾಲರ್‍‌ಗಳ ಹಣಕಾಸಿನ ನೇರವನ್ನು ಭಾರತದ ಮಾಡುತ್ತಿರುವ ಮಿಲಿಟರಿ ಪೈಪೋಟಿಗೆ ಪಾಕಿಸ್ತಾನ ಮಿಲಿಟರಿ ಆಡಳಿತ ಬಳಸಿಕೊಂಡಿದೆ ಎಂದು ಹೇಳಿದೆ.

ಸಿಎಸ್ಐಎಸ್‌ನ ಹಿರಿಯ ಸಲಹೆಗಾರ ರಿಕ್ ಬಾರ್ಟನ್ ಅವರು, ಎಫ್-16 ಫೈಟರ್ ವಿಮಾನಗಳನ್ನು ಮತ್ತು ಇತರ ನೇರ ಮಿಲಿಟರಿ ಸಹಾಯವನ್ನು ಪಾಕಿಸ್ತಾನ ಸರಕಾರ, ಭಾರತದ ವಿರುದ್ಧ ನಡೆಯುವ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ.

ತಾಲಿಬಾನ್ ಮತ್ತು ಆಲ್ ಖೈದಾ ಉಗ್ರರ ವಿರುದ್ಧ ನಡೆಸಲಾಗುತ್ತಿರುವ ಮಿಲಿಟರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡದೇ ಕೇವಲ ಭಾರತದ ವಿರುದ್ಧ ಸಂಭವಿಸಬಹುದಾದ ಮಿಲಿಟರಿ ಕಾರ್ಯಾಚರಣೆಗೆ ಅನುಕೂಲವಾಗುವ ಶಸ್ತ್ರಾಸ್ತ್ರಗಳ ಖರೀದಿ ಮತ್ತು ಸಂಗ್ರಹದಲ್ಲಿ ನಿರತವಾಗಿದೆ ಎಂದು ಅದು ಹೇಳಿದೆ.
ಮತ್ತಷ್ಟು
ಇಮ್ರಾನ್ ಉಪವಾಸ ಮುಷ್ಕರ
ಪಾಕ್‌ನಲ್ಲಿ 3000 ಬಂದಿಗಳ ಬಿಡುಗಡೆ
ಕೇಮರ್ ರೋಗ್‌ನ ಜೈಲರ್ ವಿಚಾರಣೆ ಆರಂಭ
ಜೀವವುಳಿಸಿದ ಎನ್‌ಆರ್‌ಐ ಹತಾಶ ಬದುಕು
ಸ್ಫೋಟಕ್ಕೆ ಬಾಂಬ್ ಕಟ್ಟಿದ ಮಗು ಬಳಕೆ
ಆನ್‌ಲೈನ್‌ ಸ್ನೇಹ ವಂಚನೆ: ಬಾಲಕಿ ಆತ್ಮಹತ್ಯೆ