ಕಳೆದ ವಾರ ಲಾಹೋರ್ ನಗರದಲ್ಲಿ ಬಂಧಿತನಾಗಿರುವ ತೆಹ್ರಿಕ್-ಎ-ಇನ್ಸಾಫ್ ಪಕ್ಷದ ನಾಯಕ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ಅಮರಣ ಉಪವಾಸವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಪಂಜಾಬ್ ಪ್ರಾಂತ್ಯದ ಡೆರಾ ಗಾಜಿ ಜೈಲಿನಲ್ಲಿ ಬಂಧಿತನಾಗಿರುವ ಇಮ್ರಾನ್ ಖಾನ್ ಅವರು, ತಮ್ಮ ನ್ಯಾಯವಾದಿ ಹಶಿಮ್ ಸಾನಾ ಮೂಲಕ ಸ್ಥಳಿಯ ಪತ್ರಿಕೆಗಳಿಗೆ ನೀಡಿರುವ ಪ್ರಕಟಣೆಯಲ್ಲಿ ತುರ್ತು ಪರಿಸ್ಥಿತಿ ಜಾರಿಯ ವಿರುದ್ಧ ಅಮರಣ ಉಪವಾಸ ಮಾಡುವುದಾಗಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅಧಿಕಾರದಲ್ಲಿ ಮುಂದುವರಿಯುವ ಏಕೈಕ ಉದ್ದೇಶದ ಕಾರಣ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಮತ್ತು ನ್ಯಾಯಾಧೀಶರ ಪದಚ್ಯುತಿಗೆ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿ, ತುರ್ತುಪರಿಸ್ಥಿತಿ ಆಡಳಿತವನ್ನು ಹಿಂದೆಗೆದುಕೊಳ್ಳುವವರೆಗೆ ತಾನು ಉಪವಾಸ ಸತ್ಯಾಗ್ರಹವನ್ನು ಮಾಡುವುದಾಗಿ ತೀರ್ಮಾನಿಸಿದ್ದೆನೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
ರಾಜಕೀಯ ಭೇದ ಮರೆತು ಎಲ್ಲ ಪಕ್ಷಗಳು ತನ್ನ ಉಪವಾಸ ಸತ್ಯಾಗ್ರಹವನ್ನು ಬೆಂಬಸಿಸಬೇಕು. ಮತ್ತು ತನ್ನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿರುವ ಪ್ರಕಟಣೆಯಲ್ಲಿ ರಾಷ್ಟ್ರಾದ್ಯಂತ ಉಪವಾಸ ಸತ್ಯಾಗ್ರಹ ಶಿಭಿರ ಆಯೋಜಿಸಲು ನಿರ್ದೇಶಿಸಿದ್ದಾರೆ.
|