ಆತುರಪಟ್ಟು ಮದುವೆಯಾಗಿ ವಿರಾಮದಲ್ಲಿ ಪಶ್ಚಾತಾಪ ಪಡಿ ಎನ್ನುವುದು ಸಾರ್ವತ್ರಿಕ ಸತ್ಯ. ಈ ಸತ್ಯಕ್ಕೆ ಅರಬ್ ರಾಷ್ಟ್ರ ಕೂಡ ಹೊರತಾಗಿಲ್ಲ. ಅಲ್ಲಿ ಇಂದು ವಿವಾಹ ವಿಚ್ಛೇದನದ ಪ್ರತಿವರ್ಷ ಸರಾಸರಿ 30ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಅದ್ಯಯನ ವರದಿ ತಿಳಿಸಿದೆ.
ಬೇಗ ಮದುವೆ, ಶಿಕ್ಷಣದಲ್ಲಿನ ಅಂತರ ಮತ್ತು ಹಣಕಾಸು ಪರಿಸ್ಥಿತಿಗಳು ವಿವಾಹ ವಿಚ್ಛೇದನಕ್ಕೆ ಕಾರಣ ಎನ್ನಲಾಗಿದೆ. ಕೇವಲ ಅನಿವಾಸಿ ಭಾರತೀಯರು ಮತ್ತು ವಿದೇಶಿ ನಾಗರಿಕರ ನಡುವೆ ವಿಚ್ಛೇದನ ಪ್ರಕರಣಗಳಲ್ಲಿ ಏರಿಕೆಯಾಗುತ್ತಿಲ್ಲ ಎಂದು ಅದ್ಯಯನ ತಿಳಿಸಿದ್ದು. ಮೂಲ ನಾಗರಿಕರ ಕುಟುಂಬಗಳಲ್ಲಿ ಕೂಡ ಇದೇ ಪ್ರವೃತ್ತಿ ಬೆಳವಣಿಗೆಯಾಗುತ್ತಿದೆ ಎಂದು ವರದಿಯಾಗಿದೆ.
ಅಬುಧಾಬಿಯಲ್ಲಿನ ಶರಿಯಾ ನ್ಯಾಯಾಲಯವೊಂದರಲ್ಲಿ ಅಂಕಿಅಂಶಗಳ ವಿವರ ನೀಡಿದ ಅಧಿಕಾರಿಗಳು ಮೂಲ ನಾಗರಿಕರಲ್ಲಿ ವಿವಾಹ ವಿಚ್ಛೇದನಗಳ ಪ್ರಮಾಣ ಕಳೆದ ಕೆಲವು ವರ್ಷಗಳಿಂದಿಚೆಗೆ ಪ್ರತಿಶತ 30 ರಷ್ಟು ಬೆಳವಣಿಗೆಯಾಗಿರುವು ದು ಚಿಂತೆಗೆ ಕಾರಣವಾಗಿದ್ದು, ಆದರೆ ವಿದೇಶಿ ನಾಗರಿಕ ದಂಪತಿಗಳ ವಿಚ್ಛೇದನ ಪ್ರಕರಣಗಳ ಅಂಕಿ ಅಂಶಗಳು ಸ್ಥಳಿಯ ನ್ಯಾಯಾಲಯದಲ್ಲಿ ಇಲ್ಲವೆಂದು ಈ ಅಲಭ್ಯತೆಗೆ ವಿದೇಶಿ ನಾಗರಿಕರು ತಮ್ಮ ಪತ್ನಿಯರನ್ನು ಸ್ವದೇಶದಲ್ಲಿ ಬಿಟ್ಟಿರುವುದು ಕಾರಣ ಎಂದು ಹೇಳಿದ್ದಾರೆ.
ಕಿರಿಯ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು ಶಿಕ್ಷಣದಲ್ಲಿ ಅಂತರ ಅಲ್ಲದೇ ವಿವಾಹ ವಿಚ್ಛೇದನ ಪಡೆಯುವುದಕ್ಕೆ ನಿರ್ಧರಿಸುವ ಬಹುತೇಕ ಮಹಿಳೆಯರು ತಮ್ಮ ಪತಿ ತಮ್ಮ ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಹಣಕಾಸಿನ ಸ್ವಾತಂತ್ರ್ಯ ನೀಡದಿರುವುದು ವೈವಾಹಿಕ ಜೀವನದ ಕುರಿತು ಇದ್ದ ಭ್ರಮೆ ನಿರಸವಾಗಲು ಕಾರಣ ಎಂದು ವಿಚ್ಛೇದನಕ್ಕೆ ಸಲ್ಲಿಸಿರುವ ಅರ್ಜಿಗಳಲ್ಲಿ ತಿಳಿಸಿದ್ದಾರೆ. ಕೌಟುಂಬಿಕ ವಿವಾದವನ್ನು ಪರಸ್ಪರ ಚರ್ಚೆಯ ಮೂಲಕ ಪರಿಹರಿಸಿಕೊಳ್ಳುವ ಸಾಧ್ಯತೆ ಇದ್ದು ಆ ನಿಟ್ಟಿನಲ್ಲಿ ಮೂಲ ನಾಗರಿಕರು ಪ್ರಯತ್ನಿಸಬೇಕು ಎಂದು ಶರಿಯಾ ನ್ಯಾಯಾಲಯ ವಿಚ್ಛೇದನ ಪಡೆಯಲು ಇಚ್ಚಿಸುವ ದಂಪತಿಗಳಿಗೆ ಹೇಳಿದೆ. ತರಾತುರಿಯಲ್ಲಿ ಮತ್ತು ಅಹಮ್ಮಿನ ಕಾರಣದಿಂದ ಕೌಟುಂಬಿಕ ಜೀವನವನ್ನು ಅಂತ್ಯಗೊಳಿಸುವ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪುನ
|