ದೇಶದಲ್ಲಿ ಜಾರಿಯಾಗಿರುವ ತುರ್ತುಪರಿಸ್ಥಿತಿ ಶೀಘ್ರದಲ್ಲಿ ಅಂತ್ಯಗೊಳ್ಳಲಿದ್ದು, ಈ ಮೊದಲು ನಿರ್ಧರಿಸಿದಂತೆ ಚುನಾವಣೆ ಮತ್ತು ಅದ್ಯಕ್ಷ ಪರ್ವಜ್ ಮುಷರಫ್ ಅವರು ಸೈನ್ಯಾಧಿಕಾರಿಯ ಹುದ್ದೆಯನ್ನು ತ್ಯಜಿಸಲು ಸಿದ್ಧರಾಗಿದ್ದಾರೆ ಆದ್ದರಿಂದ ಕಾಮನ್‌ವೆಲ್ತ್ ಓಕ್ಕೂಟ ರಾಷ್ಟ್ರಗಳ ಸದಸ್ಯತ್ವದಿಂದ ಪಾಕಿಸ್ತಾನವನ್ನು ಅಮಾನತ್ತುಗೊಳಿಸುವ ನಿರ್ಧಾರವನ್ನು ಸಧ್ಯಕ್ಕೆ ಮುಂದೂಡ ಬೇಕು ಎಂದು ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ಮಹ್ಮದಿಯನ್ ಸೊಮ್ರೋ ಕಾಮನ್‌ವೆಲ್ತ್ ರಾಷ್ಟ್ರಗಳನ್ನು ಕೇಳಿಕೊಂಡಿದ್ದಾರೆ.
ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಪಾಕಿಸ್ತಾನದಲ್ಲಿ ರಾಜಕೀಯ ವಾತಾವರಣ ತಿಳಿಯಾಗುತ್ತಿದೆ. ಎಂದು ಹೇಳಿದ್ದಾರೆ. ಬ್ರಿಟನ್ ಸೇರಿದಂತೆ ಒಂಬ್ತತು ದೇಶಗಳ ವಿದೇಶಾಂಗ ಸಚಿವರನ್ನು ಒಳಗೊಂಡಿರುವ ಕಾಮನ್‌ವೆಲ್ತ್ ಜಂಟಿ ಕ್ರೀಯಾ ಸಮಿತಿಯ ಸದಸ್ಯರು ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿಯ ಘೋಷಣೆಯ ನಂತರ ಬಂಧಿತರಾಗಿರುವ ರಾಜಕೀಯ ವ್ಯಕ್ತಿಗಳ ಬಿಡುಗಡೆ ಮತ್ತು ಮುಷರಫ್ ಅವರಿಗೆ ಸೈನ್ಯದ ಮುಖ್ಯಸ್ಥನ ಹುದ್ದೆಯನ್ನು ನವಂಬರ್ 22 ಒಳಗೆ ತ್ಯಜಿಸಬೇಕು ಎಂದು ಹೇಳಿದ್ದವು. ಮುಷರಫ್ ಇದಕ್ಕೆ ತಪ್ಪಿದಲ್ಲಿ ಪಾಕಿಸ್ತಾನವನ್ನು ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳ ಓಕ್ಕೂಟದಿಂದ ಅಮಾನತ್ತುಗೊಳಿಸಲಾಗುವುದು ಎಂದು ಎಚ್ಚರಿಸಿವೆ.
ಉಗಾಂಡಾದ ಕಂಪಾಲದಲ್ಲಿ, ಗುರುವಾರ ಜಂಟಿ ಕ್ರೀಯಾ ಸಮಿತಿಯು ಸಭೆ ಸೇರಿ ಪಾಕಿಸ್ತಾನದ ಸದಸ್ಯತ್ವದ ಕುರಿತು ನಿರ್ಧಾರ ತೆಗೆದುಕೊಳ್ಳಲಿವೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರು ಜಂಟಿ ಕ್ರೀಯಾ ಸಮಿತಿಯು ಸಧ್ಯಕ್ಕೆ ತಕ್ಷಣ ತನ್ನ ನಿರ್ಧಾರವನ್ನು ಮುಂದೂಡಿ, ಪಾಕಿಸ್ತಾನದಲ್ಲಿನ ರಾಜಕೀಯ ಪರಿಸ್ಥಿತಿ ಪರೀಶಿಲನೆಗೆ ನಿಯೋಗ ಕಳುಹಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.
|