ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ವಿರೋಧಿ ನಾಯಕರ ಬಿಡುಗಡೆ: ಅಮೆರಿಕ ಸ್ವಾಗತ
ಪಾಕಿಸ್ತಾನದಲ್ಲಿ ವಿರೋಧ ಪಕ್ಷಗಳ ರಾಜಕಾರಣಿಗಳು ಹಾಗೂ ಪ್ರತಿಭಟನಾಕಾರರನ್ನು ಸರಕಾರ ಬಿಡುಗಡೆಗೊಳಿಸಿರುವುದು ಪ್ರಜಾಪ್ರಭುತ್ವದತ್ತ ಸಾಗುವ ಸ್ವಾಗತಾರ್ಹ ಹೆಜ್ಜೆ ಎಂದು ಅಮೆರಿಕ ಬಣ್ಣಿಸಿದೆ.

ಸಾವಿರಾರು ಸಂಖ್ಯೆಯಲ್ಲಿ ವಿರೋದ ಪಕ್ಷಗಳ ನಾಯಕರು ಹಾಗೂ ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆಗೊಳಿಸಿರುವುದು ಮುಷರಫ್ ನೇತ್ರತ್ವದ ಸರಕಾರದ ಉತ್ತಮ ನಿರ್ಧಾರ ಎಂದು ಅಮೆರಿಕದ ಕಾರ್ಯದರ್ಶಿ ಕಾಂಡೋಲೀಝಾ ರೈಸ್ ಹೇಳಿದ್ದಾರೆ.

ಪಾಕಿಸ್ತಾನ ಸರಕಾರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಂಧಿಸಲಾದ 3,400 ವಿರೋಧ ಪಕ್ಷಗಳ ನಾಯಕರು ಹಾಗೂ ವಕೀಲರ ಬಿಡುಗಡೆಗೆ ಆದೇಶ ಹೊರಡಿಸಿದೆ.

ತುರ್ತುಪರಿಸ್ಥಿತಿಯನ್ನು ಹಿಂತೆಗೆದುಕೊಂಡು ಮುಕ್ತ ವಾತಾವರಣದಲ್ಲಿ ಚುನಾವಣೆ ನಡೆಸಲು ಅನುವಾಗುವಂತೆ ಮುಷರಫ್ ಅವರಿಗೆ ಅಮೆರಿಕ ಸಲಹೆ ನೀಡಿದೆ.

ಪಾಕಿಸ್ತಾನದಲ್ಲಿ ಭಯೋತ್ಪಾದನೆ ಚಟುವಟಿಕೆಯಲ್ಲಿ ಹೆಚ್ಚಳವಾಗಿದ್ದಲ್ಲದೇ ಬೆನ್‌ಜಿರ್ ಭುಟ್ಟೋ ಪಾಕ್‌ಗೆ ಆಗಮಿಸಿದಾಗ ಸ್ಪೋಟ ನಡೆಸಿ ಅನೇಕರ ಹತ್ಯೆಗೆ ಕಾರಣವಾಗಿದ್ದಾರೆ. ಮತ್ತು ಪಾಕ್ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರನ್ನು ಹತ್ಯೆಗೈಯಲು ಅನೇಕ ಬಾರಿ ಪ್ರಯತ್ನಗಳು ನಡೆದಿದ್ದು ಅಮೆರಿಕ ತಳ್ಳಿಹಾಕುವುದಿಲ್ಲ ಎಂದರು.
ಮತ್ತಷ್ಟು
ಇಮ್ರಾನ್ ಖಾನ್ ಬಿಡುಗಡೆ
ಅಮಾನತ್ತು ತೀರ್ಮಾನ ಮುಂದೂಡಿ ಪಾಕ್ ಮನವಿ
ಅರಬ್ ರಾಷ್ಟ್ರದಲ್ಲಿ ಏರುತ್ತಿರುವ ವಿವಾಹ ವಿಚ್ಛೇದನ ಪ್ರಮಾಣ
ಅಮರಣ ಉಪವಾಸ: ಇಮ್ರಾನ್ ಘೋಷಣೆ
ಅಮೆರಿಕದ ನೆರವು ಭಾರತದ ವಿರುದ್ಧ ಬಳಕೆ
ಇಮ್ರಾನ್ ಉಪವಾಸ ಮುಷ್ಕರ