ಶುಕ್ರವಾರ ಇಲ್ಲಿ ಆರಂಭವಾಗುವ ಕಾಮನ್‌ವೆಲ್ತ್ ಶೃಂಗಸಭೆಯಲ್ಲಿ ಪ್ರಜಾಪ್ರಭುತ್ವ ವಿಷಯವು ಕಾರ್ಯಕ್ರಮದ ಅಗ್ರಸ್ಥಾನದಲ್ಲಿದ್ದರೂ, ತುರ್ತುಪರಿಸ್ಥಿತಿ ಹೇರಿದ ಪಾಕಿಸ್ತಾನವನ್ನು ಅಮಾನತು ಮಾಡುವ ನಿರ್ಧಾರ ಕಠಿಣವಾಗಿರುತ್ತದೆ ಎಂದು ಅದು ಹೇಳಿದೆ.
ಶೃಂಗಸಭೆ ಪೂರ್ವ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಮನ್‌ವೆಲ್ತ್ ಸಮೂಹದ ಪ್ರಧಾನ ಕಾರ್ಯದರ್ಶಿ ಡಾನ್ ಮಿಕಿನಾನ್ ಪಾಕಿಸ್ತಾನದ ಅಮಾನತು ವಿಷಯವನ್ನು ಪರಿಶೀಲಿಸುತ್ತಿರುವ ಕಾಮನ್‌ವೆಲ್ತ್ ಸಚಿವ ಕಾರ್ಯ ತಂಡವು(ಸಿಎಂಎಜಿ) ಇಂದು ಸಭೆ ನಡೆಸಿತೆಂದು ಅವರು ಹೇಳಿದರು. ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ರಿಯಾಜ್ ಎಂ. ಖಾನ್ ಅವರನ್ನು ಕೂಡ ಭೇಟಿ ಮಾಡಿದ ಅವರು ವಿದೇಶಾಂಗ ಸಚಿವರಿಗೆ ಮತ್ತು ಶೃಂಗಸಭೆಯ ನಾಯಕರಿಗೆ ಶಿಫಾರಸು ಮಾಡುವ ಮುಂಚೆ ಸಿಎಂಎಜಿ ಪುನಃ ಸಭೆ ಸೇರುವುದು ಎಂದು ಅವರು ನುಡಿದರು.
ಪಾಕಿಸ್ತಾನದ ಅಮಾನತು ನಿರ್ಧಾರ ಏಕೆ ಕಠಿಣವಾಗಿರುತ್ತದೆ ಎಂಬ ಪ್ರಶ್ನೆಗೆ ಮೆಕಿನನ್, ಪಾಕಿಸ್ತಾನದಲ್ಲಿ ಸಂಭವಿಸುತ್ತಿರುವುದು ಗಂಭೀರ ಬೆಳವಣಿಗೆಯಾಗಿದೆ ಎಂದು ನುಡಿದರು. ಕಾಮನ್‌ವೆಲ್ತ್ ಮತ್ತು ಪಾಕಿಸ್ತಾನದ ಪ್ರಜಾಪ್ರಭುತ್ವದ ಬಗ್ಗೆ ಸಿಎಂಎಜಿ ಚರ್ಚೆಯಲ್ಲಿ ಗಮನನೀಡಲಿದೆ. ಮಾಲ್ಟಾ ವಿದೇಶಾಂಗ ಸಚಿವ ಮೈಕೆಲ್ ಫ್ರೆಂಡೊ ಮುಖ್ಯಸ್ಥರಾಗಿರುವ ಸಿಎಂಎಜಿ ಬ್ರಿಟನ್, ಕೆನಡಾ, ಮಲೇಶಿಯಾ ಮತ್ತು ಶ್ರೀಲಂಕಾದ 9 ರಾಷ್ಟ್ರಗಳನ್ನು ಒಳಗೊಂಡಿದೆ.
|