ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ನಿಷೇಧ
WD
ಪಾಕಿಸ್ತಾನದಲ್ಲಿ ಹೇರಿರುವ ತುರ್ತುಪರಿಸ್ಥಿತಿ ವಿರುದ್ಧ ಯಾವುದೇ ಕಾನೂನಿನ ಹೋರಾಟವನ್ನು ಅಧ್ಯಕ್ಷ ಮುಷರ್ರಫ್ ನಿಷೇಧಿಸಿದ್ದಾರೆ. ಯಾವುದೇ ಕೋರ್ಟ್, ವೇದಿಕೆ ಅಥವಾ ಯಾವುದೇ ಆಧಾರದ ಮೇಲೆ ತುರ್ತುಪರಿಸ್ಥಿತಿಯನ್ನು ಪ್ರಶ್ನಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಸಂವಿಧಾನದಲ್ಲಿ ಏನೇ ಉಲ್ಲೇಖವಾಗಿರಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಮಾಡಿದ ಎಲ್ಲ ಸುಗ್ರೀವಾಜ್ಞೆಗಳು ಮತ್ತು ಸಾಂವಿಧಾನಿಕ ತಿದ್ದುಪಡಿಗಳು ಕಾನೂನುಬದ್ಧವೆನಿಸುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಸುಪ್ರೀಂಕೋರ್ಟ್ ತುರ್ತುಪರಿಸ್ಥಿತಿ ವಿರುದ್ಧ ಸಲ್ಲಿಸಿದ ಎರಡು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಷರ್ರಫ್ ಆದೇಶ ಹೊರಬಿದ್ದಿದೆ.

ಸೇನಾ ಮುಖ್ಯಸ್ಥರ ಅಧಿಕಾರದ ಮೇಲೆ ಮುಷರ್ರಫ್ ತುರ್ತುಪರಿಸ್ಥಿತಿಯನ್ನು ಘೋಷಿಸಿ ಸಂವಿಧಾನವನ್ನು ಅಮಾನತುಗೊಳಿಸಿದ್ದರು ಮತ್ತು ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರು.
ಮತ್ತಷ್ಟು
ಪಾಕಿಸ್ತಾನದ ಅಮಾನತು ನಿರ್ಧಾರ ಕಠಿಣ
ಮುಷರ್ರಫ್ ಮರುಆಯ್ಕೆ ಪ್ರಶ್ನಿಸಿದ ಅರ್ಜಿ ವಜಾ
ವಿರೋಧಿ ನಾಯಕರ ಬಿಡುಗಡೆ: ಅಮೆರಿಕ ಸ್ವಾಗತ
ಇಮ್ರಾನ್ ಖಾನ್ ಬಿಡುಗಡೆ
ಅಮಾನತ್ತು ತೀರ್ಮಾನ ಮುಂದೂಡಿ ಪಾಕ್ ಮನವಿ
ಅರಬ್ ರಾಷ್ಟ್ರದಲ್ಲಿ ಏರುತ್ತಿರುವ ವಿವಾಹ ವಿಚ್ಛೇದನ ಪ್ರಮಾಣ