ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಫಿಲಿಪೈನ್ಸ್‌ಗೆ ಮಿಟಾಗ್ ಬಿರುಗಾಳಿ ಭೀತಿ
ಕಳೆದ ವರ್ಷ ಸಂಭವಿಸಿದ ಮಾರಕ ಪ್ರವಾಹ ಮತ್ತು ಭೂಕುಸಿತದಿಂದ ಇನ್ನೂ ಚೇತರಿಸಿಕೊಳ್ಳದ ಪೂರ್ವ ಫಿಲಿಪೈನ್ಸ್ ಪ್ರದೇಶಕ್ಕೆ ಶಕ್ತಿಶಾಲಿ ಬಿರುಗಾಳಿಯು ಅಪ್ಪಳಿಸಲಿದ್ದು, ಕರಾವಳಿ ಗ್ರಾಮಗಳಿಂದ ಮತ್ತು ನದಿತೀರಗಳಿಂದ ಸಾವಿರಾರು ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ.

ಮಿಟಾಗ್ ಬಿರುಗಾಳಿಯು ಗಂಟೆಗೆ 160 ಕಿಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಬೈಕೊಲ್ ಪ್ರದೇಶದ ಕೆಟಾಂಡುಯೇನ್ಸ್ ಪ್ರಾಂತ್ಯವನ್ನು ಸಮೀಪಿಸಿದೆ ಎಂದು ಸರ್ಕಾರದ ಮುಖ್ಯ ಹವಾಮಾನ ಮುನ್ಸೂಚಕ ನಥಾನಿಯಲ್ ಕ್ರಝ್ ತಿಳಿಸಿದ್ದಾರೆ. ಮಿಟಾಗ್ ಬಿರುಗಾಳಿ ಸೂಪರ್ ಬಿರುಗಾಳಿಯಾಗಿ ಪರಿವರ್ತನೆಯಾಗಿ ಗಂಟೆಗೆ 138 ಮೈಲು ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಕ್ರಝ್ ಹೇಳಿದ್ದಾರೆ.

ಫಿಲಿಪೈನ್ಸ್‌ನಲ್ಲಿ ಈ ವಾರ ಅಪ್ಪಳಿಸಿದ ಹಾಗಿಬೀಸ್ ಬಿರುಗಾಳಿಯಿಂದ 13 ಜನರು ಅಸುನೀಗಿದ ಬಳಿಕ ವಿಯಟ್ನಾಂನಲ್ಲಿ ಅಧಿಕಾರಿಗಳು 5,00,000 ಜನರನ್ನು ತೆರವುಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಹಾಗಿಬೀಸ್ ಗಂಟೆಗೆ 83 ಮೈಲುಗಳ ವೇಗದಲ್ಲಿ ಬೀಸಿ ವಿಯೆಟ್ನಾಂ ದಕ್ಷಿಣ ತೀರದ ಮೇಲೆ ವಾರಾಂತ್ಯದಲ್ಲಿ ಅಪ್ಪಳಿಸುವುದೆಂದು ನಿರೀಕ್ಷಿಸಲಾಗಿದೆ.

ದಕ್ಷಿಣ ಚೀನ ಸಮುದ್ರದಲ್ಲಿ ಫಿಲಿಪೈನ್ ಮೀನುಗಾರಿಕೆ ದೋಣಿ ಮುಳುಗಿ 25 ಫಿಲಿಪೈನ್ ಪೌರರು ನಾಪತ್ತೆಯಾಗಿದ್ದಾರೆ ಎಂದು ಚೀನದ ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು
ಬಸ್ ಅವಶೇಷದಡಿ ಸಿಕ್ಕಿ 30 ಸಾವು
ಕಾಮನ್‌ವೆಲ್ತ್‌‌ನಿಂದ ಪಾಕ್ ಪದಚ್ಯುತಿ
ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ನಿಷೇಧ
ಪಾಕಿಸ್ತಾನದ ಅಮಾನತು ನಿರ್ಧಾರ ಕಠಿಣ
ಮುಷರ್ರಫ್ ಮರುಆಯ್ಕೆ ಪ್ರಶ್ನಿಸಿದ ಅರ್ಜಿ ವಜಾ
ವಿರೋಧಿ ನಾಯಕರ ಬಿಡುಗಡೆ: ಅಮೆರಿಕ ಸ್ವಾಗತ