ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸಾಂಪ್ರದಾಯಿಕ ಜ್ಞಾನದ ಡಾಟಾಬೇಸ್
ಸಸ್ಯಗಳು, ಚಿಕಿತ್ಸೆಗಳು, ಆಹಾರಗಳು ಮತ್ತು ಯೋಗದ ಭಂಗಿಗಳುಳ್ಳ ನೂರಾರು ಸಾವಿರ ಮಾಹಿತಿಗಳನ್ನು ಭಾರತೀಯ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಸುಮಾರು 5000 ವರ್ಷಗಳ ಹಿಂದಿನ ಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಡಾಟಾಬೇಸ್ ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಈ ಡಾಟಾಬೇಸ್ ಐದು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಲಭ್ಯವಾಗಲಿದೆ.

ಆಯುರ್ವೇದಕ್ಕೆ ಸಂಬಂಧಿಸಿದ ಡಾಟಾಬೇಸ್ ಮೊದಲನೆ ಭಾಗ ಪೂರ್ತಿಯಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಇವುಗಳನ್ನು ಕದಿಯಬಾರದೆಂದು ಭಾರತ ಇವೆಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಈ ಡಾಟಾಬೇಸ್‌ ಬಗ್ಗೆ ಅಂತಾರಾಷ್ಟ್ರೀಯ ಪೇಟೆಂಟ್ ಕಚೇರಿಗಳಲ್ಲಿ ಒಪ್ಪಂದಕ್ಕೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಭಾರತೀಯ ವಿಜ್ಞಾನ ಸಂಪರ್ಕ ಮತ್ತು ಮಾಹಿತಿ ಸಂಪನ್ಮೂಲದ ರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷ ವಿನೋದ್ ಗುಪ್ತಾ ತಿಳಿಸಿದರು.

ಸುಮಾರು 30 ದಶಲಕ್ಷ ಪುಟಗಳನ್ನು ಹೊಂದಿರುವ ಈ ಡಾಟಾಬೇಸ್ ಸಾಂಪ್ರದಾಯಿಕ ಜ್ಞಾನದ ಅಂಕಿಅಂಶದ ಗ್ರಂಥಾಲಯ ಎಂದೇ ಹೆಸರಾಗಿದ್ದು, ಒಂದು ಸರಳ ಕಾರಣಕ್ಕಾಗಿ ಸೃಷ್ಟಿಸಲಾಗಿದೆ. ಪಾಶ್ಚಿಮಾತ್ಯ ಔಷಧಿ ದೈತ್ಯ ಕಂಪೆನಿಗಳು ಭಾರತದ ಸಾಂಪ್ರದಾಯಿಕ ವಿಧಾನದ ಮಾಹಿತಿಗಳನ್ನು ಬಳಸಿಕೊಂಡು ಉತ್ಪನ್ನವನ್ನು ತಯಾರಿಸಿ ಅದಕ್ಕೆ ಪೇಟೆಂಟ್ ಪಡೆಯುತ್ತಿವೆ.

1994ರಲ್ಲಿ ಅಮೆರಿಕದ ಕಂಪನಿಯೊಂದು ಬೇವಿನ ಮರದ ಬೀಜದಿಂದ ಉತ್ಪನ್ನ ತಯಾರಿಸಿ ಅದಕ್ಕೆ ಪೇಟೆಂಟ್ ಪಡೆಯಿತು. ಆದರೆ ಅದನ್ನು ಶತಮಾನಗಳಿಂದ ಕೀಟನಾಶಕವಾಗಿ ಭಾರತದಲ್ಲಿ ಬಳಸಲಾಗುತ್ತಿತ್ತು. ಆ ಪೇಟೆಂಟ್ ರದ್ದುಮಾಡಲು ಭಾರತದ ಅಧಿಕಾರಿಗಳು 10 ವರ್ಷಗಳ ಕಾಲ ಹೋರಾಟ ನಡೆಸಬೇಕಾಯಿತು. ಗಾಯಗಳನ್ನು ಮಾಗಲು ಸಾಂಪ್ರದಾಯಿಕವಾಗಿ ಬಳಸುವ ಅರಿಶಿನದ ಆಧಾರದ ಉತ್ಪನ್ನದ ವಿರುದ್ಧವೂ ಇದೇ ರೀತಿಯ ಹೋರಾಟ ನಡೆಸಬೇಕಾಗಿ ಬಂತು.
ಮತ್ತಷ್ಟು
ಅಲ್ ದಹಾಬಿ ಜೋರ್ಡಾನ್ ಪ್ರಧಾನಿ
ಇರಾನ್ ವಿರುದ್ಧ ಕಠಿಣ ದಿಗ್ಬಂಧನಕ್ಕೆ ಕರೆ
ಫಿಲಿಪೈನ್ಸ್‌ಗೆ ಮಿಟಾಗ್ ಬಿರುಗಾಳಿ ಭೀತಿ
ಬಸ್ ಅವಶೇಷದಡಿ ಸಿಕ್ಕಿ 30 ಸಾವು
ಕಾಮನ್‌ವೆಲ್ತ್‌‌ನಿಂದ ಪಾಕ್ ಪದಚ್ಯುತಿ
ತುರ್ತುಪರಿಸ್ಥಿತಿ ವಿರುದ್ಧ ಹೋರಾಟ ನಿಷೇಧ