ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಕಾಮನ್‌ವೆಲ್ತ್ ಪ್ರ.ಕಾರ್ಯದರ್ಶಿ ಶರ್ಮಾ
ಭಾರತದ ರಾಜತಾಂತ್ರಿಕ ವೃತ್ತಿಯಲ್ಲಿರುವ ಕಮಲೇಶ್ ಶರ್ಮಾ ಅವರು ಕಾಮನ್‌ವೆಲ್ತ್‌ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. 66 ವರ್ಷ ವಯಸ್ಸಿನ ನಿವೃತ್ತ ಐಎಫ್‌ಎಸ್ ಅಧಿಕಾರಿ ಶರ್ಮಾ ಪ್ರಸಕ್ತ ಬ್ರಿಟನ್ ಹೈಕಮೀಷನರ್ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್‌ಗೆ ಡಾನ್ ಎಂಕಿನನ್ ಅವರ ಎರಡು ಬಾರಿಯ ಅಧಿಕಾರಾವಧಿ ಮುಗಿದ ಬಳಿಕ ಶರ್ಮಾ 2 ವರ್ಷಗಳವರೆಗೆ ಪ್ರತಿಷ್ಠಿತ ಹುದ್ದೆಯನ್ನು ನಿರ್ವಹಿಸಲಿದ್ದಾರೆ.

ಜಾಗತಿಕ ವಿಷಯಗಳ ನಿರ್ವಹಣೆಯಲ್ಲಿ ವಿಪುಲ ಅನುಭವ ಹೊಂದಿರುವ ಶರ್ಮಾ ವಿಶ್ವಸಂಸ್ಥೆಗೆ ಬಾರತದ ಕಾಯಂ ಪ್ರತಿನಿಧಿ ಮತ್ತು ಅಂಕ್‌ಟ್ಯಾಡ್‌ನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಕ್ತಾರ ಮುಂತಾದ ಮುಖ್ಯ ಹುದ್ದೆಗಳನ್ನು ಅವರು ನಿರ್ವಹಿಸಿದ್ದಾರೆ.

ಶರ್ಮಾ ಪ್ರಸಕ್ತ ಕಾಮನ್‌ವೆಲ್ತ್ ಸೆಕ್ರೆಟೆರಿಯೆಟ್‌ನ ಗವರ್ನರ್ ಮಂಡಳಿ ಮತ್ತು ಕಾಮನ್‌ವೆಲ್ತ್ ಪ್ರತಿಷ್ಠಾನದ ಸದಸ್ಯರಾಗಿದ್ದು, ಅಲ್ಲಿನ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿ ತೋರಿಸಿದ್ದರು.
ಮತ್ತಷ್ಟು
ಶಸ್ತ್ರಚಿಕಿತ್ಸೆ ಅದಲು ಬದಲು: ವ್ಯಕ್ತಿ ಸಾವು
ಅವಳಿ ಆತ್ಮಹತ್ಯೆ ಬಾಂಬ್ ಸ್ಫೋಟ: 25 ಬಲಿ
ನೆಡುಮಾರನ್ ಮುಂದಿನವಾರ ದ.ಆಫ್ರಿಕಕ್ಕೆ ಭೇಟಿ
ಪಾಕ್‌ಗೆ ರವಿವಾರ ಷರೀಫ್ ಪುನರಾಗಮನ
ಸಾಂಪ್ರದಾಯಿಕ ಜ್ಞಾನದ ಡಾಟಾಬೇಸ್
ಅಲ್ ದಹಾಬಿ ಜೋರ್ಡಾನ್ ಪ್ರಧಾನಿ