ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮ್ಯಾನ್ಮಾರ್‌ನಲ್ಲಿ ಮಕ್ಕಳ ಹಕ್ಕು ಉಲ್ಲಂಘನೆ
ND
ಮ್ಯಾನ್ಮಾರ್‌ನಲ್ಲಿ ಮಕ್ಕಳನ್ನು ಸೇನೆಗೆ ನೇಮಕ ಮಾಡಿಕೊಳ್ಳುವುದು ಸೇರಿದಂತೆ ಅವರ ಹಕ್ಕುಗಳ ಗಂಭೀರ ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ತಿಳಿಸಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಕೆಲವು ಸರ್ಕಾರೇತರ ಸಂಸ್ಥೆಗಳು ಮತ್ತು ಸರ್ಕಾರದ ಜತೆ ಮಾತುಕತೆ ಪ್ರಗತಿಯಲ್ಲಿದ್ದರೂ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಗಂಭೀರ ಮಕ್ಕಳ ಹಕ್ಕು ಉಲ್ಲಂಘನೆ ಪ್ರಕರಣದಲ್ಲಿ ನಿರತವಾಗಿದೆ ಎಂದು ಬಾನ್ ಅವರ ಹೊಸ ವರದಿಯಲ್ಲಿ ತಿಳಿಸಲಾಗಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸೇನೆಗೆ ನೇಮಕ ಮಾಡಿಕೊಳ್ಳುವುದಿಲ್ಲವೆಂದು ಸರ್ಕಾರ ಭರವಸೆ ನೀಡಿದೆ, ಎರಡು ಸರ್ಕಾರೇತರ ಸಂಸ್ಥೆಗಳಾದ ಕರೇನ್ ರಾಷ್ಟ್ರೀಯ ಸಂಘಟನೆ ಮತ್ತು ಕರೇನಿ ರಾಷ್ಟ್ರೀಯ ಪ್ರಗತಿಪರ ಪಕ್ಷವು ಮಕ್ಕಳನ್ನು ಬಳಕೆ ಮತ್ತು ನೇಮಕವನ್ನು ನಿಲ್ಲಿಸುವ ಬದ್ಧತೆಗೆ ಸಹಿ ಹಾಕಿದೆ.

ಆದರೆ ಸರ್ಕಾರ ಬಡ ಮತ್ತು ಬೀದಿಮಕ್ಕಳಿಗೆ ಆಹಾರ ಮತ್ತು ಆಶ್ರಯದ ಭರವಸೆ ನೀಡಿ ಸೇನೆಗೆ ಅಪ್ರಾಪ್ತ ವಯಸ್ಕ ಬಾಲಕರನ್ನು ನೇಮಿಸಿಕೊಳ್ಳುತ್ತಿದೆಯೆಂದು ವರದಿ ತಿಳಿಸಿದೆ. ತಪ್ಪಿಸಿಕೊಳ್ಳಲು ಯತ್ನಿಸುವ ಮಕ್ಕಳಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸವುದು ತೀವ್ರ ಕಳವಳಕಾರಿ ಸಂಗತಿ ಎಂದು ಅವರು ನುಡಿದರು.
ಮತ್ತಷ್ಟು
ಕಾಮನ್‌ವೆಲ್ತ್ ಪ್ರ.ಕಾರ್ಯದರ್ಶಿ ಶರ್ಮಾ
ಶಸ್ತ್ರಚಿಕಿತ್ಸೆ ಅದಲು ಬದಲು: ವ್ಯಕ್ತಿ ಸಾವು
ಅವಳಿ ಆತ್ಮಹತ್ಯೆ ಬಾಂಬ್ ಸ್ಫೋಟ: 25 ಬಲಿ
ನೆಡುಮಾರನ್ ಮುಂದಿನವಾರ ದ.ಆಫ್ರಿಕಕ್ಕೆ ಭೇಟಿ
ಪಾಕ್‌ಗೆ ರವಿವಾರ ಷರೀಫ್ ಪುನರಾಗಮನ
ಸಾಂಪ್ರದಾಯಿಕ ಜ್ಞಾನದ ಡಾಟಾಬೇಸ್