ವಿಶ್ವ ವ್ಯಾಪಾರ ಸಂಸ್ಥೆಯ ದೋಹಾ ವಾಣಿಜ್ಯ ಒಪ್ಪಂದ ಚರ್ಚೆಗೋಸ್ಕರ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಬ್ರಿಟಿಷ್ ಪ್ರಧಾನಿ ಗೊರ್ಡಾನ್ ಬ್ರೌನ್ ಅವರನ್ನು ಕಂಪಾಲಾದಲ್ಲಿ ಭೇಟಿ ಮಾಡಿ, ನಿಂತುಹೋಗಿರುವ ಮಾತುಕತೆಯ ಮುಂದುವರಿಕೆಗೆ ಒತ್ತಾಯಿಸಿದ್ದಾರೆ.
ಅಮೆರಿಕ ಮತ್ತು ಯೂರೋಪ್‌ಗಳಲ್ಲಿ ಕೃಷಿಗೆ ಸಬ್ಸಡಿ ನೀಡುವ ಪರವಾಗಿರುವ ಬ್ರೌನ್, ಭಾರತ ಮತ್ತು ಇತರೆ ಕೆಲವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆಕ್ಷೇಪದಿಂದ ನಿಂತುಹೋಗಿರುವ ಕೃಷಿ ಸಬ್ಸಡಿ ಸಂಬಂಧ ಜಾಗತಿಕ ವ್ಯಾಪಾರ ಒಪ್ಪಂದದ ಮಾತುಕತೆಯ ಪುನಃ ಪ್ರಾರಂಭವಾಗುವ ಕುರಿತು ಬ್ರೌನ್ ಆಶಾಭಾವನೆಯನ್ನು ಹೊಂದಿದ್ದಾರೆ. ಭಾರತ ಮತ್ತು ಇತರೆ ಪ್ರದೇಶಗಳ ಗ್ರಾಮೀಣ ರೈತರ ಸೂಕ್ಷ್ಮಗಳನ್ನು ಮನವರಿಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಬ್ರೌನ್ ಅವರ ಸಿಂಗ್ ಜತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕಂಪಾಲಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಸಮ್ಮೇಳನ ಸಂದರ್ಭದಲ್ಲಿ ಉಭಯ ನಾಯಕರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
|