ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ತಮ್ಮ ಗಡಿಪಾರನ್ನು ಅಂತಿಮಗೊಳಿಸಿ ದೇಶಕ್ಕೆ ಆದಿತ್ಯವಾರದಂದು ಮರಳಲಿದ್ದಾರೆ. ಅಲ್ಲದೆ ತಮ್ಮನ್ನು ದೇಶದಿಂದ ಹೊರದಬ್ಬಿದ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷಾರಫ್ ಅವರೊಂದಿಗೆ ಮುಖಾಮುಖಿ ನಡೆಸಲಿದ್ದಾರೆ.
ಪಾಕಿಸ್ತಾನದಲ್ಲಿ ಮುಷಾರಫ್ ಹೇರಿರುವ ತುರ್ತು ಪರಿಸ್ಥಿತಿ ನಂತರದಲ್ಲಿ ಶರೀಫ್ ಅವರು ಆಗಮಿಸುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದ ಆತ್ಮ ಹತ್ಯಾ ಬಾಂಬ್ ದಾಳಿಯಿಂದ ಪಾಕಿಸ್ತಾನ ಮತ್ತೆ ಕಂಪಿಸಿದೆ.
ಶರೀಫ್ ಅವರು ಸೌದಿ ರಾಯಲ್ ವಿಮಾನದಲ್ಲಿ ಪಾಕಿಸ್ತಾನಕ್ಕೆ ಆಗಮಿಸಲಿದ್ದು, ಮಧ್ಯಹ್ನದ ವೇಳೆ ಲಾಹೋರಿನ ಪೂರ್ವ ನಗರದಲ್ಲಿ ಬಂದಿಳಿಯಲಿದ್ದಾರೆ. ನೂರಾರು ಬೆಂಬಲಿಗರು ಅವರನ್ನು ಸ್ವಾಗತಿಸಲಿದ್ದಾರೆ ಎಂದು ಪಕ್ಷ ಅಧಿಕಾರಿಗಳು ತಿಳಿಸಿದ್ದಾರೆ.
ಏಳು ವರ್ಷಗಳಲ್ಲಿ ಸೌದಿ ಅರೇಬಿಯಾದಲ್ಲಿ ತಮ್ಮ ನೆಲೆಗೆ ಸೌದಿ ಅರೇಬಿಯದ ರಾಜ ಅಬ್ದುಲ್ಲ ಅವರು ನೀಡಿದ್ದ ಗಂಡು ನಿರೋಧಕ ಮರ್ಸಿಡಿಸ್ ಕಾರು ಶನಿವಾರದಂದು ಪಾಕಿಸ್ತಾನಕ್ಕೆ ಆಗಮಿಸಿದೆ.
ಮುಷರಫ್ ಆಗಮನದ ನಿಟ್ಟಿನಲ್ಲಿ ಬ್ಯಾನರ್ ಮತ್ತು ಬಿತ್ತಿಚಿತ್ರಗಳು ಪಕ್ಷದ ಹಸಿರು ವರ್ಣದಲ್ಲಿ ನಗರದಾದ್ಯಂತ ರಾರಾಜಿಸುತ್ತಿದೆ.
"ನವಾಜ್ ಶರೀಫ್, ಪ್ರಧಾನಿ ನಾವಾಜ್ ಶರೀಫ್ ಅವರು ದೀರ್ಘಾವಧಿ ಜೀವಸಲಿ" ಎಂದು ಬೆಂಬಲಿಗರು ಮೋಟಾರು ಬೈಕುಗಳಲ್ಲಿ ಹಸಿರು ಧ್ವಜವನ್ನು ಹಾರಿಸುತ್ತಾ ನಗರಾದ್ಯಂತ ಪ್ರದಕ್ಷಿಣೆ ಮಾಡುತ್ತಿದ್ದಾರೆ.
|