ಒಂದು ವಾರಗಳ ಕಾಲ ಭಾರತದ ಭೇಟಿಗಾಗಿ ಮಲೇಷಿಯಾದ ವ್ಯಾಪಾರ ಸಚಿವ ರಫಿಧ್ ಅಜಿಜ್ ಅವರು ಭಾರತಕ್ಕೆ ಆಗಮಿಸಲಿದ್ದಾರೆಂದು ವರದಿಯಾಗಿದೆ.
ಈ ಸಂದರ್ಭದಲ್ಲಿ ಅವರು ಆಸಿಯಾನ್ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡುವ ಮೊದಲೇ ಭಾರತ ಪಾಮೈಲ್ ತೆರಿಗೆಯನ್ನು ಕಡಿಮೆಗೊಳಿಸುವುದು ಮತ್ತು ಇತರೆ ಅನೇಕ ದ್ವಿಪಕ್ಷೀಯ ವ್ಯಾಪಾರ ವ್ಯವಹಾರಗಳ ಕುರಿತು ಚರ್ಚಿಸಲಿದ್ದಾರೆ.
ಅಲ್ಲದೇ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕಮಲನಾಥ್ ಮತ್ತು ಚೆನ್ನೈ, ದೆಹಲಿ, ಮುಂಬಯಿಗಳಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ ಜತೆ ನಿರಂತರವಾಗಿ ಮಾತುಕತೆ ನಡೆಸಲಿದ್ದಾರೆ.
ಉದ್ದೇಶಿತ ಭಾರತ-ಮಲೇಷಿಯಾ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಈ ಸಂದರ್ಭದಲ್ಲಿ ಚಾಲನೆ ದೊರೆಯುವ ಸಂಭವವಿದ್ದು, ಅಧಿಕಾರಿಗಳು ಮಟ್ಟದ ಮಾತುಕತೆ ಜನವರಿಯಲ್ಲಿ ಪ್ರಾರಂಭವಾಗಲಿದೆ.
ಉದ್ದೇಶಿತ ಎಫ್‌ಟಿಎ ಒಪ್ಪಂದ ವ್ಯಾಪ್ತಿ ತುಂಬಾ ವಿಶಾಲವಾದದ್ದು, ಇದರಲ್ಲಿ ವಸ್ತುಗಳು, ಸೇವೆ, ಬಂಡವಾಳ ಹೂಡಿಕೆ ಮತ್ತು ಆರ್ಥಿಕ ಸಹಕಾರ ಸೇರಿದಂತೆ ವ್ಯಾಪಾರದ ಎಲ್ಲ ಮುಖಗಳು ಪರಿಚಯಿಸಲ್ಪಡಲಿವೆ ಎಂದು ಅಜಿಜ್ ಅವರು ನಿನ್ನೆ ಕೌಲಾಲಂಪುರ್‌ನಲ್ಲಿ ಹೇಳಿದ್ದಾರೆ.
|