ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಚೆಸ್ ಚಾಂಪಿಯನ್ ಗ್ಯಾರಿ ಕ್ಯಾಸ್ಪರೊವ್ ಅವರನ್ನು ಶನಿವಾರ ಮಾಸ್ಕೊದಲ್ಲಿ ಬಂಧಿಸಲಾಗಿದೆ. ಮುಂದಿನ ವಾರದಲ್ಲಿ ನಡೆಯಲಿರುವ ಚುನಾವಣೆಯನ್ನು ವಿರೋಧಿಸಿ ಅವರ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟಿಸುತ್ತಿರುವ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ.
ವಿರೋಧ ಪಕ್ಷದ ಸಾವಿರಾರು ಕಾರ್ಯಕರ್ತರು ಪೋಲಿಸ್‌ರೊಂದಿಗೆ ವಾಗ್ವಾದದಲ್ಲಿ ತೊಡಗಿರುವಾಗಲೇ ಕ್ಯಾಸ್ಪರೊವ್ ಮತ್ತು ಅವರ ಓರ್ವ ಅಂಗರಕ್ಷಕನ್ನು ಪೋಲಿಸರು ಬಲವಂತದ ಮೂಲಕ ಬಸ್‌ನೊಳಗೆ ನುಗ್ಗಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗ್ಯಾರಿ ಕ್ಯಾಸ್ಪರೊವ್ ಅವರನ್ನು ಕೂರಿಸಿಕೊಂಡಿದ್ದ ಬಸ್ ಸೆಂಟ್ರಲ್ ಮಾಸ್ಕೊದೆಡೆ ಹೊರಡುತ್ತಿದ್ದಂತೆ ಅವರ ಬೆಂಬಲಿಗರು ಫ್ರೀಡಂ, ಫ್ರೀಡಂ ಎಂದು ಘೋಷಣೆ ಕೂಗಲಾರಂಭಿಸಿದರು ಎಂದು ಮಾಸ್ಕೊದ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾಸ್ಕೊದ ಮುಖ್ಯ ಬೀದಿಯೊಂದರಲ್ಲಿ ಪೋಲಿಸ್‌ರನ್ನ ಭೇದಿಸಿ ಕ್ಯಾಸ್ಪರೊವ್ ನೇತ್ವದಲ್ಲಿ ರಷ್ಯಾದ ವಿರೋಧ ಪಕ್ಷದ ಕಾರ್ಯಕರ್ತರು ಮತ್ತು ರಾಷ್ಟೀಯ ಬೊಲಸ್ವಿಕ್ ಪಕ್ಷದ ಕಾರ್ಯಕರ್ತರು ಧಾವಿಸಿದಾಗ, ಪೋಲಿಸರು ಕ್ಯಾಸ್ಪರೊವ್ ಅವರನ್ನು ಬಂಧಿಸಿದರು ಎಂದು ಹೇಳಲಾಗಿದೆ.
|