ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಶಾಂತಿ ಸಮಾವೇಶಕ್ಕೆ ಕಪಿಲ್ ಸಿಬಾಲ್
ಈ ವಾರ ನಡೆಯುವ ಮಧ್ಯಪೂರ್ವ ಶಾಂತಿ ಸಮಾವೇಶಕ್ಕೆ ಭಾರತದ ನಿಯೋಗದ ನೇತೃತ್ವ ವಹಿಸಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಾಲ್ ಅಮೆರಿಕದ ರಾಜಧಾನಿಗೆ ಆಗಮಿಸಿದ್ದು, ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಆತಿಥ್ಯ ವಹಿಸಿರುವ ಭೋಜನ ಕೂಟದಲ್ಲಿ ಭಾಗವಹಿಸಲಿದ್ದಾರೆ.

ಪಶ್ಚಿಮ ಏಷ್ಯಕ್ಕೆ ವಿಶೇಷ ಪ್ರತಿನಿಧಿಯಾಗಿರುವ ಚಿನ್ಮಯ ಘಾರೇಕಾನ್ ಮತ್ತು ಪಶ್ಚಿಮ ಏಷ್ಯ ಮತ್ತು ಉತ್ತರ ಆಫ್ರಿಕದ ಮಣಿಮೇಕಲೈ ಉಸ್ತುವಾರಿ ವಹಿಸಿರುವ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ನಿಯೋಗದ ಇತರ ಸದಸ್ಯರಾಗಿದ್ದಾರೆ. ವಿದೇಶಾಂಗ ಇಲಾಖೆ ಇಂದು ರಾತ್ರಿ ಆಯೋಜಿಸಿರುವ ಭೋಜನಕೂಟದಲ್ಲಿ ಭಾರತೀಯ ನಿಯೋಗ ಪಾಲ್ಗೊಳ್ಳಲಿದ್ದು, ಮೇರಿಲ್ಯಾಂಡ್‌ನ ಅನ್ನಾಪೊಲಿಸ್ ನೌಕಾ ಅಕಾಡೆಮಿಯಲ್ಲಿ ಮಧ್ಯಪೂರ್ವ ಕುರಿತ ಅಂತಾರಾಷ್ಯ್ರೀಯ ಸಮಾವೇಶದ ಮುಖ್ಯ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸ್ಥಗಿತಗೊಂಡ ಪ್ಯಾಲೆಸ್ತೀನ್-ಇಸ್ರೇಲ್ ಶಾಂತಿ ಮಾತುಕತೆಗೆ ಪುನಶ್ಚೇತನ ನೀಡುವ ಗುರಿ ಹೊಂದಿರುವ ಈ ಶೃಂಗಸಭೆ ಮೂರು ಸೆಷನ್‌ಗಳಾಗಿ ವಿಭಜನೆಯಾಗಿದೆ. 50 ರಾಷ್ಟ್ರಗಳ 100ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವಿಶ್ವಬ್ಯಾಂಕ್,ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ಅರಬ್ ಲೀಗ್‌ನಂತ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಘಟನೆಗಳು ಸಮಾವೇಶದಲ್ಲಿ ಭಾಗವಹಿಸಲಿದೆ.
ಮತ್ತಷ್ಟು
ಷರೀಫ್ ಗಡಿ ಪಾರು ಅಂತ್ಯ, ನಾಮಪತ್ರ ಸಲ್ಲಿಕೆ
ರಷ್ಯಾ: ಕ್ಯಾಸ್ಪ್‌ರೊವ್ ಬಂಧನ
ಮಲೇಷಿಯಾ ಸಚಿವ ಭಾರತಕ್ಕೆ ಭೇಟಿ
ಪಾಕಿಸ್ತಾನಕ್ಕೆ ಇಂದು ನವಾಜ್ ಶರೀಫ್ ಆಗಮನ
ಸಿಂಗ್-ಬ್ರೌನ್ ಭೇಟಿ: ವಿಶ್ವ ವ್ಯಾಪಾರ ಒಪ್ಪಂದ ಚರ್ಚೆ
ಮ್ಯಾನ್ಮಾರ್‌ನಲ್ಲಿ ಮಕ್ಕಳ ಹಕ್ಕು ಉಲ್ಲಂಘನೆ