ರಾಷ್ಟ್ರದ ಕರಾವಳಿ ತೀರದಲ್ಲಿ ಅಪ್ಪಳಿಸಿದ ಸಿಡರ್ ಚಂಡಮಾರುತದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ದಕ್ಷಿಣ ಸುಂದರಬನ್ ಅರಣ್ಯ ಪ್ರದೇಶದಲ್ಲಿ ಸುಮಾರು 3000 ಮೀನುಗಾರರು ಸತ್ತಿದ್ದಾರೆ ಮತ್ತು 700 ಮಂದಿ ಕಾಣೆಯಾಗಿದ್ದಾರೆ ಎಂದು ಮೀನುಗಾರರ ಸಂಘಟನೆಯೊಂದು ತಿಳಿಸಿದೆ.
ಅಧಿಕೃತ ಅಂಕಿಸಂಖ್ಯೆಗಿಂತ ವಾಸ್ತವವಾಗಿ ಸತ್ತವರ ಸಂಖ್ಯೆ ಇನ್ನೂ ಹೆಚ್ಚಿದೆ ಎಂಬ ಸಾಮಾನ್ಯ ನಂಬಿಕೆಯ ನಡುವೆ ದುಬ್ಲಾರ್‌ಚಾರ್ ಮೀನುಗಾರರ ಸಂಘಟನೆಯ ಅಧ್ಯಕ್ಷ ಮೇ. ಜಿಯಾ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ನ.15ರ ಆ ದುರ್ದಿನದಂದು ಬಹುತೇಕ ಮೀನುಗಾರರಿಂದ ಕೂಡಿದ 30,000 ಜನರು ದಬ್ಲಾರ್ ಚಾರ್‌ನಲ್ಲಿರುವ ಚಂಡಮಾರುತದ ಶಿಬಿರಗಳಿಗೆ ಆಗಮಿಸಿದರು. ಆದರೆ ವಾಸ್ತವ್ಯದ ಕೊರತೆಯಿಂದ ಸುಂದರಬನ್ ಅರಣ್ಯದ ವಿವಿಧ ಶಿಬಿರಗಳಿಗೆ ಸ್ಥಳಾಂತರಗೊಂಡರು ಮತ್ತು ಅವರಲ್ಲಿ ಅನೇಕ ಮಂದಿ ಚಂಡಮಾರುತಕ್ಕೆ ಬಲಿಯಾದರು ಎಂದು ಜಿಯಾ ಹೇಳಿದ್ದಾರೆ.
|