ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸೇನೆ ಸಿಬ್ಬಂದಿಗೆ ಮುಷರ್ರಫ್ ವಿದಾಯ
WD
ಸೇನಾ ಮುಖ್ಯಸ್ಥರ ಹುದ್ದೆಗೆ ಬುಧವಾರ ರಾಜೀನಾಮೆ ನೀಡಲು ಒಂದು ದಿನ ಮುಂಚಿತವಾಗಿ ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಅವರು ತಮ್ಮ ಸೇನಾ ಸಹೋದ್ಯೋಗಿಗಳಿಗೆ ಮಂಗಳವಾರ ವಿದಾಯ ಹೇಳಿದ್ದಾರೆ. ಗುರುವಾರ ಎರಡನೆ ಅವಧಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಅವರು ರಾವಲ್ಪಿಂಡಿಯ ಜಂಟಿ ಸಿಬ್ಬಂದಿ ಮುಖ್ಯಕಚೇರಿಗೆ ಮತ್ತು ಇಸ್ಲಾಮಾಬಾದ್ ನೌಕಾ ಮತ್ತು ವಾಯುದಳದ ಮುಖ್ಯಕಚೇರಿಗಳಿಗೆ ಭೇಟಿ ನೀಡಿದರು.

ಮುಷರ್ರಫ್ ಸೇನಾ ಮುಖ್ಯಸ್ಥರ ಹುದ್ದೆ ತ್ಯಜಿಸಿದ ಬಳಿಕ ಅವರಿಗೆ ಬದಲಿಯಾಗಿ ಲೆ.ಜನರಲ್ ಅಷ್ಫಾಕ್ ಕಿಯಾನಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಿಯಾನಿ ಬಗ್ಗೆ ಪಾಶ್ಚಿಮಾತ್ಯ ಸಹೋದ್ಯೋಗಿಗಳಲ್ಲಿ ಒಳ್ಳೆಯ ಅಭಿಪ್ರಾಯವಿದ್ದು, ಬೇನಜೀರ್ ಭುಟ್ಟೊ ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿದ್ದಾಗ ಅವರ ಜತೆ ಕೆಲಸ ನಿರ್ವಹಿಸಿದ್ದರು.

ಕಿಯಾನಿ ಅಧಿಕಾರ ವಹಿಸಿಕೊಂಡ ಬಳಿಕ ಆಫ್ಘಾನಿಸ್ತಾನ ಗಡಿಯಲ್ಲಿ ಉಗ್ರಗಾಮಿಗಳ ನೆಲೆಗಳಿಂದ ಶಸ್ತ್ರಾಸ್ತ್ರ ಮತ್ತು ಹೋರಾಟಗಾರರ ಹರಿವನ್ನು ನಿಲ್ಲಿಸುವಂತೆ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಒತ್ತಡ ಬರುವುದೆಂದು ನಿರೀಕ್ಷಿಸಲಾಗಿದೆ. ಏತನ್ಮಧ್ಯೆ, ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಸೀನ್ ಮೆಕ್‌ಕರ್ಮಾಕ್ ಸಮವಸ್ತ್ರ ತ್ಯಜಿಸುವ ಮುಷರ್ರಫ್ ಆಶ್ವಾಸನೆಯನ್ನು ಸ್ವಾಗತಿಸಿದ್ದಾರೆ.
ಮತ್ತಷ್ಟು
ಷರೀಫ್, ಬೇನಜೀರ್ ಭುಟ್ಟೊ ನಾಮಪತ್ರ ಸಲ್ಲಿಕೆ
ಚೀನ: ಚಂದ್ರನ ಮೇಲ್ಮೈ ಚಿತ್ರ ಬಿಡುಗಡೆ
ಸಿಡರ್: ದಕ್ಷಿಣ ಸುಂದರಬನ್‌ನಲ್ಲಿ 3000 ಬಲಿ
ಶಾಂತಿ ಸಮಾವೇಶಕ್ಕೆ ಕಪಿಲ್ ಸಿಬಾಲ್
ಷರೀಫ್ ಗಡಿ ಪಾರು ಅಂತ್ಯ, ನಾಮಪತ್ರ ಸಲ್ಲಿಕೆ
ರಷ್ಯಾ: ಕ್ಯಾಸ್ಪ್‌ರೊವ್ ಬಂಧನ