ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಚಿನ್ನದ ಗಣಿ ಸ್ಫೋಟ:ಸಿಕ್ಕಿಬಿದ್ದ 60 ಕಾರ್ಮಿಕರು
ದಕ್ಷಿಣ ಯುಕಾಡರ್‌ನ ಚಿನ್ನದ ಗಣಿಯಲ್ಲಿ ಅಪ್ಪಳಿಸಿದ ಸ್ಫೋಟದಿಂದ ಕನಿಷ್ಠ 60 ಗಣಿಕಾರ್ಮಿಕರು ಭೂಗರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. ಕೆಲವು ಅನಿರ್ದಿಷ್ಟ ಮಂದಿ ಕಾರ್ಮಿಕರು ಸ್ಫೋಟದಲ್ಲಿ ಗಾಯಗೊಂಡಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಕ್ಕೆ ಸಿದ್ಧತೆ ನಡೆಸಿದ್ದಾರೆ.

ಕ್ವಿಟೊ ನೈರುತ್ಯಕ್ಕೆ 370 ಕಿಮೀ ದೂರದಲ್ಲಿರುವ ಪಾಂಕೆ ಎನ್ರಿಕ್ವೆಜ್ ಗ್ರಾಮದಲ್ಲಿ ಈ ಸ್ಫೋಟ ಸಂಭವಿಸಿದೆ. ಗಣಿಯಲ್ಲಿ ಭೂಗತರಾದ ಸುಮಾರು 60 ಜನರ ರಕ್ಷಣೆಗೆ ಅಧಿಕಾರಿಗಳು ತಕ್ಷಣದ ಪ್ರತಿಕ್ರಿಯೆ ನೀಡುವರೆಂದು ಒಳಾಡಳಿತ ಸಚಿವ ಗಾಸ್ಟೊವ್ ಲಾರಿಯ ತಿಳಿಸಿದರು.

ಈ ಗಣಿಯನ್ನು ಸ್ಥಳೀಯ ಸಹಕಾರ ಸಂಘ ನಡೆಸುತ್ತಿದ್ದು ಸೀಮಿತ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಲಾರಿಯ ಹೇಳಿದ್ದಾರೆ.
ಮತ್ತಷ್ಟು
ಸೇನೆ ಸಿಬ್ಬಂದಿಗೆ ಮುಷರ್ರಫ್ ವಿದಾಯ
ಷರೀಫ್, ಬೇನಜೀರ್ ಭುಟ್ಟೊ ನಾಮಪತ್ರ ಸಲ್ಲಿಕೆ
ಚೀನ: ಚಂದ್ರನ ಮೇಲ್ಮೈ ಚಿತ್ರ ಬಿಡುಗಡೆ
ಸಿಡರ್: ದಕ್ಷಿಣ ಸುಂದರಬನ್‌ನಲ್ಲಿ 3000 ಬಲಿ
ಶಾಂತಿ ಸಮಾವೇಶಕ್ಕೆ ಕಪಿಲ್ ಸಿಬಾಲ್
ಷರೀಫ್ ಗಡಿ ಪಾರು ಅಂತ್ಯ, ನಾಮಪತ್ರ ಸಲ್ಲಿಕೆ