ನಾಸಾದ ದೂರ ಸಂವೇದಿ ತಂತ್ರಜ್ಞಾನದಿಂದ ಭೂಮಿಯ ಪರಿಸರವನ್ನು ಗಮನಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡುವುದನ್ನು ವಿಜ್ಞಾನಿಗಳು ಮುಂಚಿತವಾಗಿ ಪತ್ತೆಹಚ್ಚಬಹುದು. ಕಕ್ಷೆಯಲ್ಲಿರುವ 14 ಉಪಗ್ರಹಗಳು ಮತ್ತು ನಾಸಾದ ಅಪ್ಲೈಡ್ ಸೈನ್ಸ್ ಕಾರ್ಯಕ್ರಮವು ಮಲೇರಿಯ, ವೆಸ್ಟ್ ನೈಲ್ ವೈರಸ್ ಮತ್ತು ರಿಫ್ಟ್ ವ್ಯಾಲಿ ಜ್ವರ ಮುಂತಾದ ಮಾರಕ ಕಾಯಿಲೆಗಳ ಹೊರಹೊಮ್ಮುವಿಕೆಯನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ದೂರ ಸಂವೇದಿ ತಂತ್ರಜ್ಞಾನದ ಮೂಲಕ ಸಾಧ್ಯವಾಗಿದೆ ಎಂದು ಸೈನ್ಸ್ ಡೇಲಿ ವರದಿ ಮಾಡಿದೆ.
ಹವಾಮಾನ,ಮಳೆ, ಬೆಳೆ ಮುಂತಾದ ಭೂಮಿಯ ಪರಿಸರದ ಮಾರ್ಪಾಟಿನಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಈ ತಂತ್ರಜ್ಞಾನದ ಬಳಕೆಯಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಡಿವಾಣ ಹಾಕಬಹುದು ಎಂದು ಅದು ಪತ್ರಿಕೆ ತಿಳಿಸಿದೆ.
ನಾಸಾ ಉಪಗ್ರಹಗಳು ಈಗಾಗಲೇ ಕಕ್ಷೆಯಲ್ಲಿರುವುದರಿಂದ ಮಿತವ್ಯಯಕಾರಿ ವಿಧಾನವಾಗಿದೆ. ಈ ಉಪಗ್ರಹಗಳ ನೆರವಿನಿಂದ ಭೂಮಿಯ ಹವಾಮಾನದ ಬಗ್ಗೆ ವಿಜ್ಞಾನಿಗಳು ಅಂಕಿಅಂಶ ಸಂಗ್ರಹಿಸುತ್ತಿದ್ದಾರೆಂದು ನಾಸಾದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದ ವ್ಯವಸ್ಥಾಪಕ ಜಾನ್ ಹೇನ್ಸ್ ತಿಳಿಸಿದ್ದಾರೆ.
ಜಾಗತಿಕ ತಾಪಮಾನದಿಂದ ಜೀವಿಗಳು ವಾಸಿಸುವ ಪರಿಸರದಲ್ಲಿ ಬದಲಾವಣೆ ಉಂಟುಮಾಡಿ ಮಲೇರಿಯಾ ಮುಂತಾದ ಮಾರಕ ಕಾಯಿಲೆಗಳಿಗೆ ದಾರಿ ಕಲ್ಪಿಸುತ್ತದೆ.. ದೂರ ಸಂವೇದಿ ತಂತ್ರಜ್ಞಾನದ ಮೂಲಕ ಪರಿಸರ ಬದಲಾವಣೆಯ ಬಗ್ಗೆ ಅಂಕಿಅಂಶಗಳನ್ನು ಉಪಗ್ರಹಗಳ ಮೂಲಕ ಸಂಗ್ರಹಿಸಿದ ಬಳಿಕ ಈ ಮಾಹಿತಿಯನ್ನು ಬಳಿಕ ರೋಗ ನಿಯಂತ್ರಣ ಮತ್ತು ನಿವಾರಣೆ ಇಲಾಖೆಗೆ ಕಳಿಸಲಾಗುವುದು.
ಈ ಅಂಕಿಅಂಶಗಳನ್ನು ರೋಗಗಳ ಉದ್ಭವವನ್ನು ಕುರಿತು ಮುಂಚಿತವಾಗಿ ಪತ್ತೆಹಚ್ಚಲು ಬಳಸಿಕೊಂಡು ಸಾರ್ವಜನಿಕ ಆರೋಗ್ಯ ನೀತಿಗಳನ್ನು ರೂಪಿಸಲಾಗುವುದು.
|