ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮಹಿಳಾ ಆತ್ಮಹತ್ಯೆ ಬಾಂಬರ್ ಸ್ಫೋಟ
ಬಾಗ್ದಾದ್ ಈಶಾನ್ಯಕ್ಕೆ ಅಮೆರಿಕದ ಗಸ್ತುಪಡೆಗೆ ಸಮೀಪದಲ್ಲಿ ಸ್ಫೋಟಕಗಳ ಬೆಲ್ಟ್ ಧರಿಸಿದ್ದ ಮಹಿಳೆಯೊಬ್ಬಳು ಸ್ವತಃ ಸ್ಫೋಟಿಸಿಕೊಂಡಿದ್ದರಿಂದ 7 ಮಂದಿ ಅಮೆರಿಕದ ಸೈನಿಕರು ಮತ್ತು ಐವರು ಇರಾಕಿಯರು ಗಾಯಗೊಂಡಿದ್ದಾರೆ ಎಂದು ಅಮೆರಿಕದ ಮಿಲಿಟರಿ ತಿಳಿಸಿದೆ.

ಇರಾಕ್‌ನಲ್ಲಿ ಹಿಂಸಾಚಾರ ತಗ್ಗಿರುವ ವರದಿಯಿಂದ ಉತ್ತೇಜಿತರಾದ ಅನೇಕ ಇರಾಕಿ ನಿರಾಶ್ರಿತರು ಹಿಂತಿರುಗಲು ಆರಂಭಿಸಿದ್ದು, ಬುಧವಾರ ಸಿರಿಯಾದಿಂದ ರಾತ್ರಿಪ್ರಯಾಣದ ಬಸ್ಸಿನಲ್ಲಿ ಆಗಮಿಸಿದ 800 ಜನರನ್ನು ರಾಜಧಾನಿಯಲ್ಲಿ ನಿರೀಕ್ಷಿಸಲಾಗಿದೆ.

ಒಂದು ವರ್ಷದಿಂದ ತಾವು ಮನೆಯಿಂದ ದೂರವಿರುವುದರಿಂದ ಮನೆಗೀಳು ಉಂಟಾಗಿದೆಯೆಂದು ಹೇಳಿದ ಅವರು ಇರಾಕ್‌ನಲ್ಲಿ ಪರಿಸ್ಥಿತಿ ಸುಧಾರಿಸುವ ವರದಿ ಕೇಳಿ ಹಿಂತಿರುಗಲು ಬಯಸಿದ್ದಾಗಿ ಮಧ್ಯ ಬಾಗ್ದಾದ್‌ನ ಖಲೇದ್ ಇಬ್ರಾಹಿಂ ತಿಳಿಸಿದ್ದಾರೆ.

ಆದರೆ ಅಲ್ಲಿನ ಪರಿಸ್ಥಿತಿ ವಾಸಕ್ಕೆ ಯೋಗ್ಯವಾಗಿಲ್ಲದಿದ್ದರೆ ತಾವು ಸಿರಿಯಾಗೆ ವಾಪಸು ಬರುವುದಾಗಿ ಇಬ್ರಾಹಿಂ ಹೇಳಿದರು. ಆದರೆ ಬಾಗ್ದಾದ್‌ನಲ್ಲಿ ಉದ್ವೇಗಕಾರಿ ವಾತಾವರಣ, ಭದ್ರತಾ ಆತಂಕ ಮುಂದುವರಿದಿದೆ.
ಮತ್ತಷ್ಟು
ಎಲ್‌ಟಿಟಿಇ ರೇಡಿಯೊ ನೆಲೆ ನಾಶ
ರೋಗಪತ್ತೆಗೆ ದೂರಸಂವೇದಿ ತಂತ್ರಜ್ಞಾನ
ಶ್ರೀಲಂಕಾ ಸಚಿವರ ಹತ್ಯೆ ಯತ್ನ
ಜನರಲ್ ಹುದ್ದೆಗೆ ಮುಷರ್ರಫ್ ಗುಡ್‌ಬೈ
ಎಲ್‌ಟಿಟಿಇ ಆತ್ಮಹತ್ಯಾ ಬಾಂಬ್ ದಾಳಿ: ಮೂವರಿಗೆ ಗಾಯ
ಸಡಿಲ ಮಣ್ಣಿನಲ್ಲಿ ಸಿಕ್ಕಿಬಿದ್ದ ಮಾರ್ಸ್ ರೋವರ್