ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಸೇನಾ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಿರುವುದನ್ನು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಶ್ಲಾಘಿಸಿದ್ದಾರೆ.
ಜಗತ್ತಿನ ಅನೇಕ ರಾಷ್ಟ್ರಗಳು ಮುಷರಫ್ ಸೇನಾ ಮುಖ್ಯಸ್ಥರ ಹುದ್ದೆಯನ್ನು ತ್ಯಜಿಸುವುದು ಸಾಧ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದವು. ಆದರೆ ಮುಷರಫ್ ನಮಗೆ ಸೇನಾ ಸಮವಸ್ತ್ರವನ್ನು ತೊರೆಯುವುದಾಗಿ ಹೇಳಿದ್ದು, ಅದರಂತೆ ನಡೆದುಕೊಂಡಿದ್ದಾರೆ ಎಂದು ಬುಷ್ ಸಂತಸ ವ್ಯಕ್ತಪಡಿಸಿದ್ದಾರೆ.
ಮುಷರಫ್ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಅವಿರತ ಶ್ರಮವಹಿಸಿದ್ದು,ಪಾಕ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ಚುನಾವಣೆಗಿಂತ ಮೊದಲು ತುರ್ತುಪರಿಸ್ಥಿಯನ್ನು ಹಿಂತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಅಫಘಾನಿಸ್ಥಾನದ ಗಡಿಭಾಗದಲ್ಲಿ ಅಡಗಿರುವ ಜಾಗತಿಕ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಬಂಧಿಸುವ ಕಾರ್ಯಾಚರಣೆಯಲ್ಲಿ ಮುಷರಫ್ ಅಮೆರಿಕ ದೇಶಕ್ಕೆ ನೆರವು ನೀಡಿ ಉತ್ತಮ ಸ್ನೆಹಿತರಾಗಿದ್ದಾರೆ ಎಂದು ಬುಷ್ ಮುಷರಫ್ ಅವರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.
ಪಾಕಿಸ್ತಾನ ದೇಶವನ್ನು ಪ್ರಜಾಪ್ರಭುತ್ವದ ಪುನರ್‌ನಿರ್ಮಾಣಕ್ಕಾಗಿ ಸೇನಾ ಮುಖ್ಯಸ್ಥರ ಹುದ್ದೆಯನ್ನು ತ್ಯಜಿಸಿದ್ದು,ಚುನಾವಣೆಯ ಪೂರ್ವವಾಗಿ ತುರ್ತುಪರಿಸ್ಥಿತಿಯನ್ನು ಹಿಂತೆಗೆದುಕೊಂಡಲ್ಲಿ ಉತ್ತಮ ಕಾರ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
|