ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ನನ್ನ ಹತ್ಯೆಯೇ ಎಲ್‌ಟಿಟಿಇ ಪ್ರಮುಖ ಗುರಿ-ದೇವಾನಂದ
ಎಲ್‌ಟಿಟಿಇ ನಾಲ್ಕನೇ ಬಾರಿ ಹತ್ಯೆಗೈಯಲು ವಿಫಲವಾದ ಹಿನ್ನೆಲೆಯಲ್ಲಿ ನಾನು ಉಗ್ರರಿಗೆ ರಾಜಕೀಯವಾಗಿ ಬೆದರಿಕೆಯಾಗಿದ್ದರಿಂದ ನನ್ನನ್ನು ಹತ್ಯೆಗೈಯಲು ಉಗ್ರರು ಪ್ರಯತ್ನಿಸುತ್ತಿದ್ದಾರೆ ಎಂದು ಶ್ರೀಲಂಕಾದ ಸಂಪುಟ ಸಚಿವ ದೇವನಂದಾ ಹೇಳಿದ್ದಾರೆ.

ಕೊಲಂಬೊದಲ್ಲಿ ನಾಲ್ಕನೇಯ ಬಾರಿ ಹತ್ಯಾ ಯತ್ನದಲ್ಲಿ ಪಾರಾದ ಸಚಿವ ದೇವಾನಂದ್ ತಮಿಳು ರಾಜಕೀಯದಲ್ಲಿ ಎಲ್‌ಟಿಟಿಇಗೆ ನಾನು ವಿರೋಧಿಯಾಗಿದ್ದೆನೆ ಎಂದು ಭಾವಿಸಿದ್ದರಿಂದ ನನ್ನ ಹತ್ಯೆ ಮಾಡಲು ಉಗ್ರರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಉಗ್ರರ ಯುವ ಆತ್ಮಹತ್ಯಾದಳದ ಸದಸ್ಯ ಸ್ಪೋಟಕಗಳೊಂದಿಗೆ ಕಚೇರಿಯನ್ನು ಬಲವಂತವಾಗಿ ಪ್ರವೇಶಿಸಿ ತನ್ನನ್ನು ತಾನು ಸ್ಪೋಟಿಸಿಕೊಂಡು ಸಾವನ್ನಪ್ಪಿದ್ದನು. ತಮಿಳು ರಾಜಕೀಯದಲ್ಲಿ ಎಲ್‌ಟಿಟಿಇಗೆ ನಾನು ವಿರೋಧಿಯಾಗಿದ್ದರಿಂದ ಅವರು ನನ್ನನ್ನು ಹತ್ಯೆ ಮಾಡಲು ನಿರಂತರ ಪ್ರಯತ್ನಿಸುತ್ತಿದ್ದಾರೆ

ಹತ್ಯಾಪ್ರಯತ್ನದ ಜವಾಬ್ದಾರಿಯನ್ನು ಇಲ್ಲಿಯವರೆಗೆ ಯಾವುದೇ ಸಂಘಟನೆಗಳು ತೆಗೆದುಕೊಳ್ಳದಿದ್ದರೂ ಸಚಿವರ ವಿರೋಧಿಯಾಗಿರುವ ಉಗ್ರರ ಕೃತ್ಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮತ್ತಷ್ಟು
ಮುಷರಫ್ ರಾಜೀನಾಮೆ:ಬುಷ್ ಶ್ಲಾಘನೆ
ಮುಷರಫ್ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ
ಮಹಿಳಾ ಆತ್ಮಹತ್ಯೆ ಬಾಂಬರ್ ಸ್ಫೋಟ
ಎಲ್‌ಟಿಟಿಇ ರೇಡಿಯೊ ಕೇಂದ್ರ ನಾಶ
ರೋಗಪತ್ತೆಗೆ ದೂರಸಂವೇದಿ ತಂತ್ರಜ್ಞಾನ
ಶ್ರೀಲಂಕಾ ಸಚಿವರ ಹತ್ಯೆ ಯತ್ನ