ಗುಪ್ತದಳಗಳ ತಪ್ಪು ಮಾಹಿತಿಯಿಂದಾಗಿ ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ 14 ಮಂದಿ ಕಾರ್ಮಿಕರ ಮೇಲೆ ಅಮೆರಿಕದ ಮಿತ್ರಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ನೂರಿಸ್ತಾನ ಪ್ರಾಂತದಲ್ಲಿ ಅಮೆರಿಕ ಸೈನ್ಯಕ್ಕಾಗಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಇಂಜಿನಿಯರ್‌ಗಳು ಹಾಗೂ ಕಾರ್ಮಿಕರು ರಾತ್ರಿ ಟೆಂಟ್‌ನಲ್ಲಿ ಮಲಗಿದ ಸಂದರ್ಭದಲ್ಲಿ ಅಮೆರಿಕ ಮಿತ್ರಪಡೆಗಳು ದಾಳಿ ನಡೆಸಿದಾಗ ಬಲಿಯಾಗಿದ್ದಾರೆ ಎಂದು ಕಾಬೂಲ್ ಮೂಲದ ನಿರ್ಮಾಣ ಕಂಪೆನಿಯ ನಿರ್ದೆಶಕ ನುರೂಲ್ಲಾ ಜಲಾಲಿ ತಿಳಿಸಿದ್ದಾರೆ
ಬಡಕಾರ್ಮಿಕರು ಅಮೆರಿಕದ ಮಿತ್ರಪಡೆಗಳ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಅಫಘಾನಿಸ್ಥಾನದಲ್ಲಿರುವ ವಿರೋಧಿಗಳು ಅಮೆರಿಕ ಪಡೆಗಳಿಗೆ ತಪ್ಪು ಮಾಹಿತಿ ನೀಡಿ ಈ ಘಟನೆಗೆ ಕಾರಣವಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪೂರ್ವಮಾಹಿತಿಯಲ್ಲಿ 22 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು ನಂತರ 14 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಜಲಾಲಿ ತಿಳಿಸಿದ್ದಾರೆ.
|