ಶ್ರೀಲಂಕಾದಲ್ಲಿ ನಡೆದ ಬಾಂಬ್‌ಸ್ಪೋಟ ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿ ಅನೇಕರು ಗಾಯಗೊಂಡಿರುವ ಘಟನೆಯನ್ನು ಖಂಡಿಸಿದ್ದು ಶಾಂತಿಯನ್ನು ಕದಡಿಸುವ ಯತ್ನ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ,ಗಾಯಾಳುಗಳಿಗೆ ಸಂತಾಪವನ್ನು ಸೂಚಿಸಿದ್ದು ಇದೊಂದು ಹೇಯ ಕೃತ್ಯ ಎಂದು ಬಣ್ಣಿಸಿದ್ದಾರೆ.
ನಾಗರಿಕರ ಭದ್ರತೆಗಾಗಿ ತಮಿಳು ಉಗ್ರರು ಹಾಗೂ ಸೇನಾಪಡೆಗಳು ಶಾಂತಿಯನ್ನು ಜಾರಿಗೊಳಿಸುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.
ಮಂಗಳವಾರದಂದು ನಡೆದ ಉಗ್ರರ ದಾಳಿಯಲ್ಲಿ ಶ್ರೀಲಂಕಾದ ಕಿಲಿನೋಚ್ಚಿಯಲ್ಲಿರುವ ಜಾಗತಿಕ ಅಹಾರ ಸಂಸ್ಥೆಯ ಕಚೇರಿಗೆ ಹಾನಿಯಾಗಿರುವುದು ಗಂಭೀರ ವಿಷಯವಾಗಿದೆ ಎಂದು ಬಾನ್ ಹೇಳಿದ್ದಾರೆ.
ಶ್ರೀಲಂಕಾದ ಜನನಿಬಿಡ ಮಾರುಕಟ್ಟೆಯಲ್ಲಿ ಮಂಗಳವಾರದಂದು ನಡೆದ ಆತ್ಮಹತ್ಯಾದಳದ ಮಹಿಳಾ ಸದಸ್ಯೆ ನಡೆಸಿದ ಬಾಂಬ್‌ಸ್ಪೋಟದಲ್ಲಿ 18 ಮಂದಿ ಸಾವನ್ನಪ್ಪಿದ್ದು 37 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|