ತಮಿಳರ ಮೇಲೆ ಮಲೇಷಿಯಾದಲ್ಲಿ ದಬ್ಬಾಳಿಕೆ ನಡೆಯುತ್ತಿದ್ದು,ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಹೇಳಿಕೆಗೆ ಮಲೇಷಿಯಾ ತೀಕ್ಷ್ಣವಾಗಿ ಪ್ರತಿಕ್ರಯಿಸಿದೆ.
ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ ಮಲೇಷಿಯಾ ಸಚಿವ ನಜ್ರಿ ಅಜೀಜ್ ಇದರಿಂದ ಕರುಣಾನಿಧಿಗೆ ಆಗಬೇಕಾದುದ್ದು ಏನು ಇಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ಕರುಣಾನಿಧಿ ಅವರ ರಾಜ್ಯ ತಮಿಳುನಾಡು, ಮಲೇಷಿಯಾವಲ್ಲ.ತಮ್ಮ ರಾಜ್ಯದ ಬಗ್ಗೆ ಚಿಂತೆ ಮಾಡಲಿ.ತಮ್ಮ ರಾಜ್ಯದಲ್ಲಿ ಸಾವಿರಾರು ಸಮಸ್ಯೆಗಳಿವೆ ಎಂದು ಸಚಿವ ಅಜೀಜ್ ಟೀಕಿಸಿದ್ದಾರೆ.
ಮಲೇಷಿಯಾದಲ್ಲಿ ತಮಿಳು ಜನಾಂಗದ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು ಪ್ರಧಾನಿ ಮನಮೋಹನ್ ಸಿಂಗ್ ಮಧ್ಯಸ್ಥಿಕೆವಹಿಸಿ ಸೂಕ್ತ ಕ್ರಮತೆಗೆದುಕೊಳ್ಳಬೇಕು ಎಂದು ಪತ್ರ ಬರೆದಿದ್ದರು.
ಹಿಂದು ಹಕ್ಕು ಸಮಿತಿ ನಡೆಸಿದ ಮೆರವಣಿಗೆ ಯಾವುದೇ ರಾಜಕೀಯ ಅಥವಾ ಧರ್ಮ ಪ್ರೇರಿತವಾಗಿರಲಿಲ್ಲ ಎಂದು ಸಂಘಟನೆಯ ಆಯೋಜಕರು ಸ್ಪಷ್ಟಪಡಿಸಿದ್ದರೂ ಸಚಿವ ಅಜೀಜ್ ಕ್ಷಮೆಯಾಚನೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
|